Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಮುತ್ತಿಕೊಂಡ ಆಂಧ್ರ ಅಭಿಮಾನಿಗಳು

ರಾಕಿಂಗ್ ಸ್ಟಾರ್ ಯಶ್ ಮುತ್ತಿಕೊಂಡ ಆಂಧ್ರ ಅಭಿಮಾನಿಗಳು
ಬೆಂಗಳೂರು , ಶನಿವಾರ, 4 ಜನವರಿ 2020 (11:25 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ಆಂಧ‍್ರದಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರ ಅಭಿಮಾನ ಎಷ್ಟೆಂದು ಈಗ ಸ್ವತಃ ಯಶ್ ಗೂ ಅರಿವಾಗಿದೆ.


ಆಂಧ್ರದ ಕಡಪ ಬಳಿ ಶೂಟಿಂಗ್ ಗೆ ತೆರಳಿದ್ದ ಯಶ್ ರನ್ನು ನೋಡಲು ಅಭಿಮಾನಿಗಳ ಸಮೂಹವೇ ಸೇರಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನೋಡಲು ಯಶ್ ತಮ್ಮ ವಾಹನದಿಂದ ಇಳಿದುಬರಬೇಕಾಯಿತು.

ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳ ಕಿರುಚಾಟ ಮೇರೆ ಮೀರಿತ್ತು. ಕೊನೆಗೆ ಎಲ್ಲರೆಡೆ ಕೈ ಬೀಸಿದ ಯಶ್ ಸೆಲ್ಫೀಗೆ ಪೋಸ್ ಕೊಟ್ಟು ಅಭಿಮಾನಿಗಳ ಮನತಣಿಸಿದರು. ಈ ವೇಳೆ ತಳ್ಳಾಟ, ನೂಕಾಟ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಯಶ್ ತೆಲುಗಿನಲ್ಲೇ ಮಾತನಾಡಿ ಅಭಿಮಾನಿಗಳಿಗೆ ಖುಷಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಚಂದನ್ ಅಮ್ಮ ನೋಡಿ ದೀಪಿಕಾ ದಾಸ್ ಅಮ್ಮ ಕಲೀಬೇಕು!