Select Your Language

Notifications

webdunia
webdunia
webdunia
webdunia

ರಾಕಿ ಬಾಯ್ ಯಶ್ ಬರ್ತ್ ಡೇ ಆಚರಣೆ ಮನೆ ಮುಂದೆ ಅಲ್ಲ, ಮೈದಾನದಲ್ಲೇ ನಡೆಯಲಿದೆ!

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಶುಕ್ರವಾರ, 3 ಜನವರಿ 2020 (09:23 IST)
ಬೆಂಗಳೂರು: ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.


ತಮ್ಮ ನೆಚ್ಚಿನ ಸ್ಟಾರ್ ನಟನ ಹುಟ್ಟುಹಬ್ಬ ಎಂದರೆ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿ ಹಾರ, ಕೇಕ್ ತಂದು ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ 5000 ಕೆ.ಜಿ. ತೂಕದ ಕೇಕ್ ಜತೆಗೆ ಮತ್ತೊಂದು ವಿಶೇಷತೆಯೂ ರಾಕಿ ಬಾಯ್ ಹುಟ್ಟುಹಬ್ಬಕ್ಕಿರಲಿದೆ.

ಈ ಬಾರಿ ಅಭಿಮಾನಿಗಳು ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ರಾಕಿ ಬಾಯ್ ಹುಟ್ಟುಹಬ್ಬ ಆಚರಿಸಲಿದ್ದಾರೆ. ಜನವರಿ 8 ರಂದು ಯಶ್ ಈ ಮೈದಾನಕ್ಕೆ ಆಗಮಿಸಲಿದ್ದು, ಅಲ್ಲಿಯೇ ಅಭಿಮಾನಿಗಳು ಆಗಮಿಸಿ ಬರ್ತ್ ಡೇ ಸಂಭ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡದಲ್ಲಿ ಪೈಲ್ವಾನ್ ಸಿನಿಮಾ ಪ್ರಸಾರವಾಗೋದು ಈ ದಿನ