Publish Date: Thu, 02 Jan 2020 (10:09 IST)
Updated Date: Thu, 02 Jan 2020 (10:10 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೋಷನ್ ಪೋಸ್ಟರ್ ಕ್ರಿಸ್ ಮಸ್ ಗೆ ಬಿಡುಗಡೆಯಾಗಿತ್ತು.
ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಬರ್ಟ್ ತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ರಾಬರ್ಟ್ ಸಿನಿಮಾದ ಡಬ್ಬಿಂಗ್ ನಡೆಯುತ್ತಿದ್ದು ದರ್ಶನ್ ತಮ್ಮ ಪಾಲಿನ ಡಬ್ಬಿಂಗ್ ಮಾಡುತ್ತಿದ್ದಾರೆ. ಇವರಿಗೆ ನಿರ್ದೇಶಕ ತರುಣ್ ಸುಧೀರ್, ಹಿನ್ನಲೆ ಸಂಗೀತ ನೀಡುತ್ತಿರುವ ಹರಿಕೃಷ್ಣ ಜತೆಯಾಗಿದ್ದಾರೆ.
ರಾಬರ್ಟ್ ಸಿನಿಮಾದಲ್ಲಿ ದರ್ಶನ್ ರಗಡ್ ಲುಕ್ ಈಗಾಗಲೇ ವೈರಲ್ ಆಗಿದೆ. ಇದರಲ್ಲಿ ಅದ್ಭುತ ಸಾಹಸ ದೃಶ್ಯಗಳಿರಲಿದ್ದು, ದರ್ಶನ್ ಕೆರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲು ಸಿನಿಮಾವಾಗಲಿದೆ ಎಂದು ನಿರೀಕ್ಷಿಸಲಾಗಿದೆ.