Publish Date: Thu, 02 Jan 2020 (09:48 IST)
Updated Date: Thu, 02 Jan 2020 (09:50 IST)
ಬೆಂಗಳೂರು: ‘ಆ ದಿನಗಳು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಚಿರಪರಿಚಿತರಾದ ನಟ ಚೇತನ್ ವರ್ಷಾರಂಭದಲ್ಲೇ ಮದುವೆ ಸುದ್ದಿ ನೀಡಿದ್ದಾರೆ.
ಚಿತ್ರರಂಗದ ಜತೆಗೆ ಸಾಮಾಜಿಕ ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದ ಚೇತನ್ ತಾವು ಬಹುದಿನಗಳಿಂದ ಪ್ರೀತಿಸುತ್ತಿದ್ದ ಅಸ್ಸಾಂ ಮೂಲದ ಹುಡುಗಿಯನ್ನು ಮದುವೆಯಾಗುತ್ತಿದ್ದಾರಂತೆ. ಆದರೆ ಇವರು ಚಿತ್ರರಂಗದವರಲ್ಲ ಎಂದು ಚೇತನ್ ಹೇಳಿದ್ದಾರೆ.
ಆದರೆ ಸರಳವಾಗಿ ಮದುವೆಯಾಗಬೇಕು ಎನ್ನುವುದು ಅವರ ಆಸೆಯಂತೆ. ಅದರಂತೇ ಮನೆಯವರ ಸಮ್ಮುಖದಲ್ಲಿ ಅನಾಥಾಶ್ರಮದಲ್ಲಿ ಅನಾಥ ಮಕ್ಕಳ ಮುಂದೆ ಹಸೆಮಣೆಯೇರಲು ಚೇತನ್ ನಿರ್ಧರಿಸಿದ್ದಾರಂತೆ. ಉಳಿದ ವಿವರಗಳನ್ನು ಸದ್ಯದಲ್ಲೇ ಹೇಳುವೆ ಎಂದಿದ್ದಾರೆ.