Select Your Language

Notifications

webdunia
webdunia
webdunia
webdunia

ಸಂಕ್ರಾಂತಿಗೆ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ ಘೋಷಣೆ

ಸಂಕ್ರಾಂತಿಗೆ ರಿಯಲ್  ಸ್ಟಾರ್ ಉಪೇಂದ್ರ ಹೊಸ ಸಿನಿಮಾ ಘೋಷಣೆ
ಬೆಂಗಳೂರು , ಗುರುವಾರ, 2 ಜನವರಿ 2020 (09:11 IST)
ಬೆಂಗಳೂರು: ಈ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿರುವ ಸೂಚನೆ ನೀಡಿದ್ದಾರೆ. ಈಗಾಗಲೇ ಕಬ್ಜ ಸಿನಿಮಾ ಶುರು ಮಾಡಿಕೊಂಡಿರುವ ಉಪೇಂದ್ರರ ಮತ್ತೊಂದು ಸಿನಿಮಾ ಸಂಕ್ರಾಂತಿಗೆ ಘೋಷಣೆಯಾಗಲಿದೆ.


ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಮುಹೂರ್ತ ಡಿಸೆಂಬರ್ ನಲ್ಲಿ ನೆರವೇರಿತ್ತು. ಈ ವರ್ಷದ ಆರಂಭ ಅಂದರೆ ಇದೇ ತಿಂಗಳ ಮೊದಲ ವಾರ ಚಿತ್ರೀಕರಣ ಆರಂಭಿಸುವುದಾಗಿ ಚಿತ್ರತಂಡ ಘೋಷಿಸಿತ್ತು.

ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದ್ದಾರೆ ರಿಯಲ್ ಸ್ಟಾರ್. ಶಶಾಂಕ್ ನಿರ್ದೇಶನದಲ್ಲಿ ಉಪೇಂದ್ರ ನಾಯಕರಾಗಲಿರುವ ಹೊಸ ಸಿನಿಮಾದ ಟೈಟಲ್ ಸಂಕ್ರಾಂತಿಗೆ ಘೋಷಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ಸಾಲು ಸಾಲು ಚಿತ್ರಗಳ ಹೊಸ ಪೋಸ್ಟರ್ ಬಿಡುಗಡೆ