Publish Date: Wed, 01 Jan 2020 (09:47 IST)
Updated Date: Wed, 01 Jan 2020 (09:49 IST)
ಬೆಂಗಳೂರು: ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುವ ಜತೆಗೆ ಸರಣಿ ಟ್ವೀಟ್ ಮಾಡಿ ಸಂದೇಶವನ್ನೂ ಕೊಟ್ಟಿದ್ದಾರೆ.
ತಮ್ಮ ಕುಟುಂಬ ಸಮೇತ 2020 ರ ಹೊಸ ವರ್ಷಕ್ಕೆ ಶುಭ ಕೋರಿರುವ ಕಿಚ್ಚ ಈ ವರ್ಷ ನಿಮಗೆ ಹೇಗಿರಬೇಕೆಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದಾರೆ.
ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಹೆಜ್ಜೆಗುರುತುಗಳನ್ನು ಮೆಲುಕು ಹಾಕಿ. ಇಷ್ಟು ವರ್ಷ ನಿಮಗೆ ಜತೆಯಾದವರು, ನಿಮ್ಮ ಕ್ಷಮೆಗೆ ಕಾದಿರುವವರ ಬಗ್ಗೆ ಯೋಚನೆ ಮಾಡಿ. ಹಾಗೆಯೇ ನಿಮ್ಮ ಹೊಸ ವರ್ಷ ಹೇಗಿರಬೇಕೆಂದು ನಿರ್ಧಾರ ಮಾಡಿ ಎಂದು ಸುದೀಪ್ ಸಂದೇಶ ಬರೆದಿದ್ದಾರೆ.