Publish Date: Tue, 31 Dec 2019 (09:21 IST)
Updated Date: Tue, 31 Dec 2019 (09:23 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಸಿನಿಮಾದ ಬಳಿಕ ಇದೀಗ ರಾಬರ್ಟ್ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲವಿದೆ.
ರಾಬರ್ಟ್ ಸಿನಿಮಾದ ಮೋಷನ್ ಪೋಸ್ಟರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ದರ್ಶನ್ ಪಕ್ಕಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ರಾಬರ್ಟ್ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಈ ಸಿನಿಮಾದಲ್ಲಿ ಅಂಡರ್ ವಾಟರ್ ಸೀಕ್ವೆನ್ಸ್ ಇರಲಿದ್ದು, ಇದು ನಾಲ್ಕು ನಿಮಿಷಗಳ ಕಾಲಾವಧಿಯಲ್ಲಿರಲಿದೆಯಂತೆ. ಈ ಸಿನಿಮಾದಲ್ಲಿ ಈ ದೃಶ್ಯವೇ ಹೈಲೈಟ್ ಆಗಲಿದೆ ಎನ್ನಲಾಗಿದೆ. ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ.