Publish Date: Mon, 30 Dec 2019 (09:14 IST)
Updated Date: Mon, 30 Dec 2019 (09:18 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಹಾಡಿನ ಸ್ಟೆಪ್ ಹ್ಯಾಂಡ್ಸಪ್ ಚಾಲೆಂಜ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ಆ ಚಾಲೆಂಜ್ ಸ್ವೀಕರಿಸಿರುವ ರಕ್ಷಿತ್ ಗೆಳೆಯ, ನಿರ್ದೇಶಕ ರಿಷಬ್ ಶೆಟ್ಟಿಯವರ ಪುಟಾಣಿ ಪುತ್ರ ರನ್ವಿತ್ ಶೆಟ್ಟಿ ಹಾಡಿಗೆ ತಮ್ಮದೇ ಶೈಲಿಯಲ್ಲಿ ಮುದ್ದು ಮುದ್ದಾಗಿ ಸ್ಟೆಪ್ ಹಾಕಿದ್ದಾರೆ! ರನ್ವಿತ್ ಹ್ಯಾಂಡ್ಸಪ್ ಹಾಡಿಗೆ ಕೈಯಾಡಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ರಿಷಬ್ ಚಮಕ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ, ರನ್ವಿತ್ ಮಾತನಾಡುವ ತೊದಲು ಶೈಲಿಯಲ್ಲೇ ರಕ್ಷಿತ್ ಮಾಮನಿಗೆ ಸಂದೇಶ ಬರೆದು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.