Select Your Language

Notifications

webdunia
webdunia
webdunia
webdunia

ಅವನೇ ಶ್ರೀಮನ್ನಾರಾಯಣ ಮೊದಲ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

ಅವನೇ ಶ್ರೀಮನ್ನಾರಾಯಣ ಮೊದಲ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 27 ಡಿಸೆಂಬರ್ 2019 (09:32 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಿಗ್ಗೆಸ್ಟ್ ರಿಲೀಸ್ ಅವನೇ ಶ್ರೀಮನ್ನಾರಾಯಣ. ಇಂದು ಮೊದಲ ಶೋ ನೋಡಿ ಪ್ರೇಕ್ಷಕರು ಸಿನಿಮಾ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.


ಅವನೇ ಶ್ರೀಮನ್ನಾರಾಯಣ ಸಿನಿಮಾದ ಸಂಗೀತ, ರಕ್ಷಿತ್ ಶೆಟ್ಟಿ ತಮಾಷೆ ಇಷ್ಟವಾಗಿದೆ ಎಂದು ಹೆಚ್ಚಿನ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಆದರೆ ಸಿನಿಮಾ ಕೊಂಚ ಉದ್ದವಾಯ್ತು ಎಂದವರೂ ಇದ್ದಾರೆ. ಆದರೆ ಇಂತಹ ಕತೆಯನ್ನು ಹೇಳುವಾಗ ಸಿನಿಮಾ ಇಷ್ಟು ಸುದೀರ್ಘ ಇರಲೇಬೇಕು ಎಂದು ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಆದರೆ ಪ್ರತೀ ಎರಡು ನಿಮಿಷಕ್ಕೊಮ್ಮೆ ಬರುವ ಕಾಮಿಡಿ ಪಂಚ್, ರಕ್ಷಿತ್ ಶೆಟ್ಟಿ ಮ್ಯಾನರಿಸಂ, ಫೈಟಿಂಗ್ ಎಲ್ಲವೂ ಪಕ್ಕಾ ಮನರಂಜನೆ ಒದಗಿಸುತ್ತದೆ. ಟ್ವಿಟರಿಗರು ಈ ಸಿನಿಮಾಗೆ 3.5 ರೇಟಿಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಮುಕ್ತಾಯವಾಗುತ್ತಿದೆ ಅಗ್ನಿಸಾಕ್ಷಿ ಧಾರವಾಹಿ