Publish Date: Mon, 30 Dec 2019 (09:01 IST)
Updated Date: Mon, 30 Dec 2019 (09:09 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಫೈನಲ್ ಎಪಿಸೋಡ್ ಈ ವಾರ ಪ್ರಸಾರವಾಗಲಿದೆ. ನಿನ್ನೆಯಷ್ಟೇ ಕೊನೆಯ ದಿನದ ಶೂಟಿಂಗ್ ನಡೆದಿದೆ.
ಶೂಟಿಂಗ್ ಕೊನೆಯ ದಿನ ನಾಯಕಿ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಇನ್ ಸ್ಟಾಗ್ರಾಂ ಲೈವ್ ಬಂದಿದ್ದಾರೆ. ಈ ವೇಳೆ ಅವರಿಗೆ ಮುಂದಿನ ಪ್ರಾಜೆಕ್ಟ್ ಏನು ಎಂಬ ಪ್ರಶ್ನೆ ಬಂದಿದೆ.
ಈ ಸಂದರ್ಭದಲ್ಲಿ ವೈಷ್ಣವಿ ಅಗ್ನಿಸಾಕ್ಷಿ ಧಾರವಾಹಿ ಮುಗಿದ ಬಳಿಕ ಮುಂದೇನು ಮಾಡಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಕಲರ್ಸ್ ವಾಹಿನಿಯ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಎರಡನೇ ಆವೃತ್ತಿ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಯಿದ್ದು, ಅದರಲ್ಲಿ ವೈಷ್ಣವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಆದರೆ ಇದು ಪಕ್ಕಾ ಆಗಿಲ್ವಂತೆ. ಆದರೆ ಶೀಘ್ರದಲ್ಲೇ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ್ದಾರೆ.