Publish Date: Tue, 24 Dec 2019 (10:34 IST)
Updated Date: Tue, 24 Dec 2019 (10:35 IST)
ಬೆಂಗಳೂರು: ಬಿಗ್ ಬಾಸ್ ಮನೆಗೆ ಬಂದ ಮೇಲೆ ಸ್ಪರ್ಧಿಗಳಿಗೆ ಮನೆಯಿಂದ ಒಂದೇ ಒಂದು ಕರೆ, ಧ್ವನಿ ಬಂದರೂ ಸಾಕು. ಕಣ್ಣಲ್ಲಿ ನೀರು ತುಂಬಿಬರುತ್ತದೆ. ಹರೀಶ್ ರಾಜ್ ಗೆ ಮತ್ತೆ ನಿನ್ನೆ ಮನೆಯಿಂದ ಪತ್ನಿ, ಮಗಳ ಕರೆ ಬಂದಿದೆ.
ನಿನ್ನೆ ಹರೀಶ್ ರಾಜ್ ಮತ್ತು ಪತ್ನಿ ಭೇಟಿಯಾಗಿ ಆರು ವರ್ಷವಾದ ದಿನವಂತೆ. ಇದೇ ಕಾರಣಕ್ಕೆ ಹರೀಶ್ ಪತ್ನಿ ಮತ್ತು ಮಗಳು ಧ್ವನಿ ಕೇಳಿಸಲಾಯಿತು. ಆದರೆ ಇದನ್ನು ನೋಡಿ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅಪಸ್ವರವೆತ್ತಿದ್ದಾರೆ.
ಈ ಮೊದಲು ಕ್ಯಾಪ್ಟನ್ ಆದಾಗ ಹರೀಶ್ ಗೆ ಮನೆಯಿಂದ ಕರೆ ಬಂದಿತ್ತು. ಈ ಮೂಲಕ ಹರೀಶ್ ಗೆ ಮಾತ್ರ ಎರಡೆರಡು ಬಾರಿ ಮನೆಯವರ ಧ್ವನಿ ಕೇಳಿಸುವ ಭಾಗ್ಯ ಸಿಕ್ಕಿದೆ. ಆದರೆ ಪ್ರಿಯಾಂಕಗೆ ಒಮ್ಮೆಯೂ ಮನೆಯವರ ಧ್ವನಿ ಕೇಳಿಸಿಲ್ಲ. ಹರೀಶ್ ಗೆ ಮಾತ್ರ ಯಾಕೆ ಈ ಅವಕಾಶ ಎಂದು ವೀಕ್ಷಕರು ಪ್ರಶ್ನಿಸಿದ್ದಾರೆ.