Publish Date: Mon, 23 Dec 2019 (09:23 IST)
Updated Date: Mon, 23 Dec 2019 (09:25 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋದ ಸದಸ್ಯರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಬಿಗ್ ವಿಕೆಟ್ ಬಿದ್ದಿದ್ದು, ಪ್ರಬಲ ಸ್ಪರ್ಧಿ ಹರೀಶ್ ರಾಜ್ ಹೊರಬಿದ್ದಿದ್ದಾರೆ.
ಈ ವಾರ ಮನೆಯಿಂದ ಹೊರ ಹೋಗಲು ಚಂದನಾ, ಚಂದನ್ ಆಚಾರ್, ಹರೀಶ್ ರಾಜ್, ಕುರಿ ಪ್ರತಾಪ್, ದೀಪಿಕಾ ದಾಸ್, ಭೂಮಿ ಶೆಟ್ಟಿ ಸೇರಿದಂತೆ ಘಟಾನುಘಟಿಗಳೇ ನಾಮಿನೇಟ್ ಆಗಿದ್ದರು. ಹಾಗಾಗಿ ಯಾರೇ ಹೊರಹೋದರೂ ಬಿಗ್ ವಿಕೆಟ್ ಬೀಳುತ್ತದೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು.
ಅದರಂತೇ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಹರೀಶ್ ರಾಜ್ ಹೊರ ಹೋಗುತ್ತಿರುವುದಾಗಿ ಶಾಕಿಂಗ್ ಸುದ್ದಿ ನೀಡಿದರು. ಆದರೆ ಹರೀಶ್ ರಾಜ್ ದೊಡ್ಮನೆ ಹೆಬ್ಬಾಗಿಲ ಮೂಲಕ ಹೊರ ಹೋದ ಹರೀಶ್ ಸ್ಟೋರ್ ರೂಂ ಮೂಲಕ ವಾಪಸ್ ಬಂದಾಗ ಎಲ್ಲರಿಗೂ ಶಾಕ್ ಆಗಿತ್ತು. ಇದು ಬಿಗ್ ಬಾಸ್ ಹರೀಶ್ ಮತ್ತು ಇತರ ಸ್ಪರ್ಧಿಗಳಿಗೆ ನೀಡಿದ ಒಂದು ಸಣ್ಣ ಚಮಕ್ ಆಗಿತ್ತು. ಅಸಲಿಗೆ ಈ ವಾರ ಎಲಿಮಿನೇಷನ್ ಇರಲಿಲ್ಲ.