Select Your Language

Notifications

webdunia
webdunia
webdunia
webdunia

ಬಾರ್ ಗಲಾಟೆ: ನಟಿ ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ವಂದನಾ

ಬಾರ್ ಗಲಾಟೆ: ನಟಿ ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ವಂದನಾ
ಬೆಂಗಳೂರು , ಸೋಮವಾರ, 30 ಡಿಸೆಂಬರ್ 2019 (14:18 IST)
ಬೆಂಗಳೂರು: ಕ್ರಿಸ್ ಮಸ್ ಮುನ್ನಾದಿನ ಬಾರ್ ಒಂದರಲ್ಲಿ ನಿರ್ಮಾಪಕಿ ವಂದನಾ ಮತ್ತು ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಗಲ್ರಾನಿ ನಡುವೆ ಗಲಾಟೆ ನಡೆದು ಪ್ರಕರಣ ದಾಖಲಾಗಿತ್ತು.


ಈ ವಿಚಾರವಾಗಿ ಸಂಜನಾ ಮಾಧ‍್ಯಮಗಳಿಗೆ ಸ್ಪಷ್ಟನೆ ನೀಡುವಾಗ ನನ್ನ ಹೆಸರು ಬಳಸಿಕೊಂಡು ವಂದನಾ ಪುಕ್ಸಟೆ ಪ್ರಚಾರ ಪಡೆದರು ಎಂದಿದ್ದರಲ್ಲದೆ, ನನ್ನ ಮೇಲೆ ವಿನಾಕಾರಣ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಸುದೀರ್ಘ ಸ್ಪಷ್ಟನೆ ಕೊಟ್ಟಿದ್ದರು.

ಸಂಜನಾ ಹೇಳಿಕೆಯ ಬಳಿಕ ಇದೀಗ ವಂದನಾ ನಟಿ ವಿರುದ್ಧ ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿರುವುದಾಗಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಈ ಇಬ್ಬರ ಜಗಳ ಇನ್ನು, ಎಲ್ಲಿಯವರೆಗೆ ಮುಟ್ಟುತ್ತದೋ ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಸಿನಿಮಾಗೆ ವಿಲನ್ ಆಗಲ್ಲ ಕಿಚ್ಚ ಸುದೀಪ್