Publish Date: Tue, 31 Dec 2019 (09:07 IST)
Updated Date: Tue, 31 Dec 2019 (09:10 IST)
ಬೆಂಗಳೂರು: ಕೊಡಗಿನ ಬೆಡಗಿ, ಈಗ ತೆಲುಗು, ತಮಿಳಿನಲ್ಲೂ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಸಿನಿಮಾ ಜೀವನಕ್ಕೆ ಕಾಲಿಟ್ಟು ಮೂರು ವರ್ಷವಾಗಿದೆ. ನಿನ್ನೆ ಈ ಸಂಭ್ರಮವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ರಶ್ಮಿಕಾಗೆ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಒಬ್ಬರು ರಶ್ಮಿಕಾ ಹಿಟ್ ಸಿನಿಮಾಗಳ ಪಟ್ಟಿ ಮಾಡಿ ವಿಶ್ ಮಾಡಿದ್ದಾರೆ. ಆದರೆ ಇದರಲ್ಲಿ ಕನ್ನಡ ಸಿನಿಮಾಗಳ ಹೆಸರಿಲ್ಲ. ಈ ಶುಭಾಷಯಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ಹಿಟ್ ಲಿಸ್ಟ್ ನಲ್ಲಿ ಕಿರಿಕ್ ಪಾರ್ಟಿ ಹೆಸರನ್ನೂ ಸೇರಿಸಿ ಎಂದು ಕಣ್ಣು ಮಿಟುಕಿಸುವ ಸ್ಮೈಲಿ ಪ್ರಕಟಿಸಿದ್ದಾರೆ. ಇದು ಕನ್ನಡದ ಹೆಸರಿನಲ್ಲಿ ತಮ್ಮನ್ನು ಟ್ರೋಲ್ ಮಾಡುವವರಿಗೆ ರಶ್ಮಿಕಾ ಕೊಟ್ಟ ಟಾಂಗ್ ಇರಬಹುದು ಎನ್ನಲಾಗಿದೆ.
ರಶ್ಮಿಕಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೆಲವರು ಯಾವತ್ತೂ ಏರಿದ ಏಣಿಯನ್ನು ಮರಿಯಬೇಡ. ಕನ್ನಡದ ಕಿರಿಕ್ ಪಾರ್ಟಿಯಿಂದಾಗಿಯೇ ನೀನು ಈವತ್ತು ಈ ರಂಗದಲ್ಲಿ ಇಷ್ಟು ಬೆಳೆದಿದ್ದ ಎನ್ನುವುದನ್ನು ಮರೆಯಬೇಡ ಎಂದು ಕಾಮೆಂಟ್ ಮಾಡಿದ್ದಾರೆ. ಅಂತೂ ಈ ಮೂರು ವರ್ಷದ ಸಿನಿ ಕೆರಿಯರ್ ನಲ್ಲಿ ರಶ್ಮಿಕಾ ಸಿನಿಮಾ ಸುದ್ದಿಯಾದಷ್ಟೇ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ ಎನ್ನುವುದಂತೂ ಸತ್ಯ.