Publish Date: Mon, 23 Dec 2019 (08:51 IST)
Updated Date: Mon, 23 Dec 2019 (08:53 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವ ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಜತೆಗಿನ ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶಕರು ರಕ್ಷಿತ್ ಗೆ ರಶ್ಮಿಕಾ ಬ್ರೇಕ್ ಅಪ್ ಆದ ಮೇಲೆ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯಾಗಿದೆ ಎಂದು ಕೇಳಿದರು. ಇದಕ್ಕೆ ರಕ್ಷಿತ್ ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸಿ ಮುನ್ನಡೆದಿದ್ದೇನೆ ಎಂದಿದ್ದಾರೆ.
‘ಜೀವನ ಸಾಕಷ್ಟು ಅನುಭವ ಕಲಿಸುತ್ತದೆ. ಅದರಲ್ಲಿ ಇದೂ ಒಂದು. ನಾನು ಸಾಕಷ್ಟು ಪಾಠ ಕಲಿತಿದ್ದೇನೆ. ಅದರಿಂದ ದೂರ ನಡೆದಿದ್ದೇನೆ. ಇಂತಹ ವಿಚಾರವನ್ನೆಲ್ಲಾ ಮರೆತು ಮುನ್ನಡೆಯಲೇಬೇಕು. ಯಾಕೆಂದರೆ ಜೀವನ ಎಲ್ಲಕ್ಕಿಂತ ದೊಡ್ಡದು. ಇದೆಲ್ಲಾ ಜೀವನದಲ್ಲಿ ಬರುವ ಸಣ್ಣ ವಿಚಾರಗಳಷ್ಟೇ. ಜೀವನ ಮಾಡಲು ಇದಕ್ಕಿಂತ ದೊಡ್ಡ ಕಾರಣಗಳಿವೆ’ ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ.