ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ಮೊದಲ ಎಸೆತಕ್ಕೆ ಮೊದಲು ನಡೆದ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
ಮೊದಲ ಎಸೆತದಲ್ಲೇ ನೀರಜ್ 87.58 ದೂರ ಎಸೆದು ಚಿನ್ನಕ್ಕೆ ಗುರಿಯಿಟ್ಟಿದ್ದರು. ಆದರೆ ಈ ಎಸೆತ ಎಸೆಯುವ ಮೊದಲು ಅವರ ಜ್ವಾವೆಲಿನ್ ನಾಪತ್ತೆಯಾಗಿತ್ತಂತೆ.
ಹುಡುಕಾಡಿದಾಗ ಅದು ಪಾಕ್ ಆಟಗಾರ ಅರ್ಶದ್ ನದೀಂ ಕೈಯಲ್ಲಿತ್ತು. ನಾನು ತಕ್ಷಣವೇ ಅವರ ಬಳಿ ಹೋಗಿ ಈ ಜ್ವಾವೆಲಿನ್ ನನಗೆ ಕೊಡಿ, ಇದು ನನ್ನದು. ನಾನೀಗ ಇದನ್ನೇ ಎಸೆಯಬೇಕು ಎಂದರಂತೆ. ಬಳಿಕ ಅವರು ಜ್ವಾವೆಲಿನ್ ನೀಡಿದರು. ಹೀಗಾಗಿ ಅವಸರದಲ್ಲಿ ಹೋಗಿ ಮೊದಲ ಎಸೆತ ಎಸೆದೆ ಎಂದು ನೀರಜ್ ಹೇಳಿದ್ದಾರೆ. ಹಾಗಿದ್ದರೂ ಅವರು ಮೊದಲ ಸ್ಥಾನ ಪಡೆದಿದ್ದು ಈಗ ಇತಿಹಾಸ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!