Daily Horoscope

Select Your Language

Notifications

webdunia
webdunia
webdunia
webdunia

ಗುರು ಕಾಶೀನಾಥ್ ಮನೆಗೆ ಭೇಟಿ ಕೊಟ್ಟ ನೀರಜ್ ಚೋಪ್ರಾ

ನೀರಜ್ ಚೋಪ್ರಾ
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ನೀರಜ್ ಚೋಪ್ರಾ, ಈಗ ತಮ್ಮ ಗುರು, ಕನ್ನಡಿಗ ಕಾಶೀನಾಥ್ ಮನೆಗೆ ಭೇಟಿ ಕೊಟ್ಟಿದ್ದಾರೆ.


ಕಾಶೀನಾಥ್ ಮೂಲತಃ ಉತ್ತರ ಕರ್ನಾಟಕದ ಶಿರಸಿಯವರು. ಆರಂಭದ ದಿನಗಳಲ್ಲಿ ನೀರಜ್ ಗೆ ತರಬೇತಿ ನೀಡಿದವರು. ಇದೇ ಕಾರಣಕ್ಕೆ ಪುಣೆಯ ಕೋರೆಗಾಂವ್ ನಲ್ಲಿರುವ ಕಾಶೀನಾಥ್ ಮನೆಗೆ ಭೇಟಿ ಕೊಟ್ಟ ನೀರಜ್ ಕುಟುಂಬ ಸದಸ್ಯರೊಂದಿಗೆ ಕೆಲವು ಕಾಲ ಕಳೆದಿದ್ದಾರೆ.

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಶಸ್ಸು ಸಿಕ್ಕ ಮೇಲೂ ತಮ್ಮ ಬೆಳವಣಿಗೆಗೆ ಸಹಕಾರ ನೀಡಿದ ಗುರುವನ್ನು ನೀರಜ್ ಮರೆತಿಲ್ಲ ಎನ್ನುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಟ್ಟಿಂಗ್ ಸಂಬಂಧ ಎಂ.ಎಸ್. ಧೋನಿ ವಿರುದ್ಧ ಸುದ್ದಿ ಪ್ರಸಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ