ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್ ಅಶಿಸ್ತಿನ ಕಾರಣಕ್ಕಾಗಿ ನಿಷೇಧಕ್ಕೊಳಗಾಗಿದ್ದು ಇದೀಗ ಭಾರತೀಯ ಕುಸ್ತಿ ಫೆಡರೇಷನ್ ಗೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ.
ಟೋಕಿಯೋದಲ್ಲಿ ಎಲ್ಲಾ ಕ್ರೀಡಾಳುಗಳಂತೆ ಕ್ರೀಡಾ ಗ್ರಾಮದಲ್ಲುಳಿಯದೇ ಪ್ರತ್ಯೇಕವಾಗಿದ್ದ ವಿನೇಶ್, ಭಾರತ ಕ್ರೀಡಾಳುಗಳಿಗೆ ನೀಡಲಾಗಿದ್ದ ಪ್ರಾಯೋಜಿತ ಸಮವಸ್ತ್ರವನ್ನೂ ಧರಿಸಿರಲಿಲ್ಲ. ಸರಿಯಾಗಿ ತರಬೇತಿಗೂ ಬಂದಿರಲಿಲ್ಲ. ಇದರ ಬೆನ್ನಲ್ಲೇ ಅವರು ಕ್ವಾರ್ಟರ್ ಫೈನಲ್ ಸುತ್ತಿನಲ್ಲೇ ಸೋಲುಂಡು ಕೂಟದಿಂದ ನಿರ್ಗಮಿಸಿದ್ದರು.
ಇದರ ಬಳಿಕ ಕುಸ್ತಿ ಫೆಡರೇಷನ್ ವಿನೇಶ‍್ ಅಶಿಸ್ತಿನ ವರ್ತನೆಗೆ ಒಂದು ವರ್ಷಗಳ ಕಾಲ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಿತ್ತು. ಇದರ ಬೆನ್ನಲ್ಲೇ ವಿನೇಶ್ ಈಗ ಕ್ಷಮಾಪಣಾ ಪತ್ರವೊಂದನ್ನು ನೀಡಿದ್ದಾರೆ. ಆದರೆ ಸದ್ಯಕ್ಕೆ ಆಕೆಯ ಮೇಲೆ ವಿಧಿಸಲಾಗಿರುವ ನಿಷೇಧ ಶಿಕ್ಷೆ ಹಿಂಪಡೆಯುವುದು ಅನುಮಾನವಾಗಿದೆ.