Publish Date: Fri, 13 Aug 2021 (08:46 IST)
Updated Date: Fri, 13 Aug 2021 (09:10 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಬಾಕ್ಸರ್ ಲೊವ್ಲಿನಾ ಬರ್ಗೊಹೆ ಅವರಿಗೆ ಈಗ ಅಸ್ಸಾಂ ಸರ್ಕಾರ ಸೂಕ್ತ ಗೌರವ ನೀಡಿದೆ.
ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಲೊವ್ಲಿನಾರನ್ನು ಅಸ್ಸಾಂ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಹುದ್ದೆ ನೀಡಿ ಗೌರವಿಸಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ಆದೇಶ ಹೊರಡಿಸಿದ್ದಾರೆ.
ಅಲ್ಲದೆ, ಲೊವ್ಲಿನಾ ಹೆಸರಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸ್ಪೋರ್ಟಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. ಲೊವ್ಲಿನಾ ತವರಿಗೆ ಬಂದಾಗ ಸ್ವತಃ ಸಿಎಂ ಹಿಮಂತ ಬಿಸ್ವ ವಿಮಾನ ನಿಲ್ದಾಣಕ್ಕೆ ತೆರಳಿ ಪದಕ ವಿಜೇತೆಯನ್ನು ಸ್ವಾಗತಿಸಿದ್ದರು.