Select Your Language

Notifications

webdunia
webdunia
webdunia
webdunia

‘ನೀರಜ್’ ಹೆಸರಿದ್ದವರಿಗೆ ಉಚಿತ ಪೆಟ್ರೋಲ್ ಹಂಚಿದ ಮಾಲಿಕ!

‘ನೀರಜ್’ ಹೆಸರಿದ್ದವರಿಗೆ ಉಚಿತ ಪೆಟ್ರೋಲ್ ಹಂಚಿದ ಮಾಲಿಕ!
ಅಹಮ್ಮದಾಬಾದ್ , ಬುಧವಾರ, 11 ಆಗಸ್ಟ್ 2021 (09:35 IST)
ಅಹಮ್ಮದಾಬಾದ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಗೌರವಾರ್ಥ ಇಲ್ಲೊಬ್ಬ ಪೆಟ್ರೋಲ್ ಬಂಕ್ ಮಾಲಿಕ ಎರಡು ದಿನ ಅದೇ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ಪೆಟ್ರೋಲ್ ನೀಡಿದ್ದಾರೆ.
Photo Courtesy: Twitter


ಇದು ನಡೆದಿರುವುದು ಗುಜರಾತ್ ನಲ್ಲಿ. ಪೆಟ್ರೋಲ್ ಬಂಕ್ ಮಾಲಿಕ ಅಯೂಬ್ ಪಠಾಣ್ ತಮ್ಮ ಬಂಕ್ ಗೆ ಸೂಕ್ತ ದಾಖಲೆಗಳೊಂದಿಗೆ ನೀರಜ್ ಎಂಬ ಹೆಸರಿನವರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದವರಿಗೆ ಉಚಿತವಾಗಿ 501 ರೂ. ಮೌಲ್ಯದ ಪೆಟ್ರೋಲ್ ನೀಡಿದ್ದಾರೆ.

ಆದರೆ ಇದು ಎರಡು ದಿನದ ಆಫರ್ ಮಾತ್ರ. ಇದರ ಲಾಭ ಪಡೆದ ಅನೇಕರು ಸೂಕ್ತ ದಾಖಲೆಗಳನ್ನು ಒದಗಿಸಿ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರ್ಡ್ಸ್ ಅಂಗಣದಲ್ಲಿ ಟೀಂ ಇಂಡಿಯಾ ಅಭ್ಯಾಸ ಶುರು