ಹೈದರಾಬಾದ್: ಮೂಗುತಿ ಸುಂದರಿ, ಭಾರತ ಮಹಿಳಾ ಟೆನಿಸ್ ಗೆ ಹೊಸ ಮೆರುಗು ತಂದ ಸಾನಿಯಾ ಮಿರ್ಜಾ ಸೋಲಿನೊಂದಿಗೆ ಈಗ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ದುಬೈ ಟೆನಿಸ್ ಚಾಂಪಿಯನ್ ಶಿಪ್ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಆಡಿದ ಸಾನಿಯಾ ಮಿರ್ಜಾ ಈ ಪಂದ್ಯ ಸೋತಿದ್ದಾರೆ. ಇದರೊಂದಿಗೆ ಸಾನಿಯಾ ಟೆನಿಸ್ ವೃತ್ತಿ ಬದುಕು ಕೊನೆಗೊಂಡಿದೆ.
ಸಾನಿಯಾ ಈಗಾಗಲೇ ಗ್ರ್ಯಾಂಡ್ ಸ್ಲಾಂ ಟೂರ್ನಿಗಳಿಗೆ ವಿದಾಯ ಘೋಷಿಸಿದ್ದರು. ಇದೀಗ ಸಾನಿಯಾ ವೃತ್ತಿಪರ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟೆನಿಸ್ ಲೋಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಆಟಗಾರ್ತಿಗೆ ಸೋಲಿನ ವಿದಾಯ ಹೇಳಿರುವುದು ವಿಪರ್ಯಾಸ. ಅಭಿಮಾನಿಗಳೂ ಸಾನಿಯಾಗೆ ಭಾವುಕ ವಿದಾಯ ಹೇಳಿದ್ದಾರೆ.