Select Your Language

Notifications

webdunia
webdunia
webdunia
webdunia

ಅಭಿಮಾನಿಯ ಹುಚ್ಚಾಟ: ಕೊಹ್ಲಿಗೆ ಲಿಪ್ ಕಿಸ್!

ಅಭಿಮಾನಿಯ ಹುಚ್ಚಾಟ: ಕೊಹ್ಲಿಗೆ ಲಿಪ್ ಕಿಸ್!
ಮುಂಬೈ , ಬುಧವಾರ, 22 ಫೆಬ್ರವರಿ 2023 (09:20 IST)
Photo Courtesy: Instagram
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದರೆ ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಮದುವೆಯಾದ ಬಳಿಕವೂ ಕೊಹ್ಲಿಗೆ ಲೇಡೀಸ್ ಫ್ಯಾನ್ಸ್ ಸಂಖ್ಯೆಯೇನೂ ಕಡಿಮೆಯಾಗಿಲ್ಲ.

ಹೀಗಿರುವಾಗ ಕೊಹ್ಲಿಗೆ ಮಹಿಳಾ ಅಭಿಮಾನಿಯೊಬ್ಬರು ನೇರವಾಗಿ ಲಿಪ್ ಕಿಸ್ ಮಾಡಿದರೆ?! ಇಂತಹದ್ದೊಂದು ಕೆಲಸ ಮಾಡಿ ಮಹಿಳಾ ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹರಿಯಬಿಟ್ಟಿದ್ದಾರೆ.

ಆದರೆ ಅಭಿಮಾನಿ ಲಿಪ್ ಕಿಸ್ ಮಾಡಿರುವುದು ಕೊಹ್ಲಿ ಮೇಣದ ಪ್ರತಿಮೆಗೆ. ರನ್ ಮೆಷಿನ್ ಗೌರವಾರ್ಥ ಮೇಣದ ಪ್ರತಿಮೆ ನಿರ್ಮಿಸಲಾಗಿದ್ದು, ಈ ಪ್ರತಿಮೆಯ ತುಟಿಗೆ ಕಿಸ್ ಮಾಡುವ ಮಹಿಳೆ ವಿಡಿಯೋ ಹರಿಯಬಿಡುತ್ತಾರೆ. ಆದರೆ ಇದನ್ನು ನೆಟ್ಟಿಗರು ಖಂಡಿಸಿದ್ದಾರೆ. ಈ ರೀತಿ ಸಾರ್ವಜನಿಕವಾಗಿ ನಡೆದುಕೊಳ್ಳುವುದು ಒಪ್ಪುವಂತದ್ದಲ್ಲ.  ಇಂತಹ ಹುಚ್ಚಾಟ ನಡೆಸಲು ನಾಚಿಕೆಯಾಗಬೇಕು ಎಂದು ನೆಟ್ಟಿಗರು ಮಹಿಳಾ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮೃತಿ ಮಂಧನಾ ಕ್ರಶ್ ಯಾರು ಗೊತ್ತಾ?