ಮುಂಬೈ: ಟ್ರೋಲಿಗರು ಟೀಕಿಸುವುದಕ್ಕೂ ಜಸ್ಪ್ರೀತ್ ಬುಮ್ರಾಗೆ ಆಗುವುದಕ್ಕೂ ಸರಿ ಹೋಯ್ತು ಎನ್ನುವುದು ಇದಕ್ಕೇ ನೋಡಿ.
									
			
			 
 			
 
 			
			                     
							
							
			        							
								
																	ಇಷ್ಟು ದಿನ ಗಾಯದಿಂದಾಗಿ ಕ್ರಿಕೆಟ್ ನಿಂದ ದೂರವಿದ್ದ ಜಸ್ಪ್ರೀತ್ ಬುಮ್ರಾ ಈಗ ಫಿಟ್ ಆಗಿ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಟೆಸ್ಟ್ ಪಂದ್ಯ ಮತ್ತು ಏಕದಿನ ಸರಣಿಗೆ ಅವರು ತಂಡಕ್ಕೆ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣ ಎನ್ ಸಿಎನಿಂದ ಇನ್ನೂ ಅವರಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಿಕ್ಕಿಲ್ಲ.
									
										
								
																	ಇದೀಗ ಅವರು ಐಪಿಎಲ್ ಗೆ ತಯಾರಿ ಶುರು ಮಾಡಿದ್ದಾರೆ. ಮುಂಬರುವ ಐಪಿಎಲ್ ಮೂಲಕ ಬುಮ್ರಾ ಸಕ್ರಿಯ ಕ್ರಿಕೆಟ್ ಗೆ ಮರಳಲಿದ್ದಾರೆ. ಈ ಬಗ್ಗೆ ನೆಟ್ಟಿಗರು ಈ ಹಿಂದೆಯೂ ಹಲವು ಬಾರಿ ಅವರನ್ನು ಟೀಕಿಸಿದ್ದರು. ಬುಮ್ರಾಗೆ  ಐಪಿಎಲ್ ಆಡಲು ಯಾವುದೇ ಫಿಟ್ನೆಸ್ ಸಮಸ್ಯೆ ಇರುವುದಿಲ್ಲ. ದೇಶದ ಪರ ಆಡಲು ಮಾತ್ರ ಫಿಟ್ನೆಸ್ ಸಮಸ್ಯೆಯಾಗುತ್ತದೆ ಎಂದು ಟೀಕಿಸಿದ್ದರು. ವಿಪರ್ಯಾಸವೆಂದರೆ ಈಗ ಅವರು ಅದೇ ಹಾದಿಯಲ್ಲಿದ್ದಾರೆ.