Select Your Language

Notifications

webdunia
webdunia
webdunia
webdunia

ಬಾರ್ಡರ್,ಗವಾಸ್ಕರ್ ಟ್ರೋಫಿ ಉಳಿಸಿಕೊಂಡ ಭಾರತ: ದ್ವಿತೀಯ ಟೆಸ್ಟ್ ನಲ್ಲಿ ಗೆಲುವು

ನವದೆಹಲಿ , ಭಾನುವಾರ, 19 ಫೆಬ್ರವರಿ 2023 (13:51 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವನ್ನು ಟೀಂ ಇಂಡಿಯಾ  6ವಿಕೆಟ್ ಗಳಿಂದ ಗೆದ್ದುಕೊಂಡಿದೆ.

ಈ ಮೂಲಕ ಸರಣಿ ಸಮಬಲಗೊಂಡಿದ್ದು, ಟ್ರೋಫಿ ಭಾರತದ ಬಳಿಯೇ ಉಳಿದುಕೊಳ್ಳಲಿದೆ. ಕಳೆದ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ಹೀಗಾಗಿ ಈ ಸರಣಿಯ ಮುಂದಿನ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದರೂ ಸರಣಿ ಸಮಬಲಗೊಳ‍್ಳಲಿದ್ದು, ಟ್ರೋಫಿ ಭಾರತದ್ದಾಗಲಿದೆ.

ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 263 ರನ್ ಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 262 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಜಡೇಜಾ, ಅಶ್ವಿನ್ ದಾಳಿಗೆ ಕುಸಿದ ಆಸೀಸ್ ಕೇವಲ 113 ರನ್ ಗಳಿಗೆ ಆಲೌಟ್ ಆಯಿತು. ಜಡೇಜಾ 7 ವಿಕೆಟ್ ಪಡೆದರೆ ಉಳಿದ ಮೂರು ವಿಕೆಟ್ ಅಶ್ವಿನ್ ಪಾಲಾಯಿತು.

ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮತ್ತೆ ಕೆಎಲ್ ರಾಹುಲ್ ಕೈಕೊಟ್ಟರು. ಅವರ ಕೊಡುಗೆ ಕೇವಲ 1 ರನ್. ಆದರೆ ನಾಯಕ ರೋಹಿತ್ ಶರ್ಮಾ ಉತ್ತಮವಾಗಿ ಆಡುತ್ತಿದ್ದದು. ದುರದೃಷ್ಟವಶಾತ್ 31 ರನ್ ಗಳಿಸಿದಾಗ ರನೌಟ್ ಆದರು. ವಿರಾಟ್ ಕೊಹ್ಲಿ 20 ರನ್ ಗೆ ವಿಕೆಟ್ ಒಪ್ಪಿಸಿದರೆ ಶ್ರೇಯಸ್ ಅಯ್ಯರ್ 12 ರನ್ ಗಳಿಸಲಷ್ಟೇ ಶಕ್ತರಾದರು.  100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಪೂಜಾರ ತಮ್ಮ ಖ್ಯಾತಿಗೆ ತಕ್ಕಂತೆ ನಿಧಾನಗತಿಯಲ್ಲಿ ಆಡಿ ಕೊನೆಯವರೆಗೂ ಅಜೇಯರಾಗುಳಿದು 31 ರನ್ ಗಳಿಸಿದರು.

ಕೊನೆಯಲ್ಲಿ ಮಿಂಚಿದ ವಿಕೆಟ್ ಕೀಪರ್ ಬ್ಯಾಟಿಗ ಭರತ್ ಅಜೇಯ 23 ರನ್ ಗಳಿಸಿದರು. ಕಳೆದ ಮೂರು ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದ ಭರತ್ ಇಂದು ಕೊಂಚ ಆತ್ಮವಿಶ್ವಾಸದಿಂದ ಆಡಿ ಕೆಲವು ಅದ್ಭುತ ಶಾಟ್ ಹೊಡೆದು ಗಮನ ಸೆಳೆದರು. ಅಂತಿಮವಾಗಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ರನ್ ಹಿಂದೆ ಬಿದ್ದ ಟೀಂ ಇಂಡಿಯಾ: ದ್ವಿತೀಯ ಇನಿಂಗ್ಸ್ ನಲ್ಲಿ ಆಸೀಸ್ ಭರ್ಜರಿ ಬ್ಯಾಟಿಂಗ್