Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ದೆಹಲಿಯಲ್ಲಿ ಹೋಟೆಲ್ ಸಮಸ್ಯೆ, ಮನೆಯಲ್ಲೇ ಉಳಿದುಕೊಂಡ ಕೊಹ್ಲಿ

ಟೀಂ ಇಂಡಿಯಾಗೆ ದೆಹಲಿಯಲ್ಲಿ ಹೋಟೆಲ್ ಸಮಸ್ಯೆ, ಮನೆಯಲ್ಲೇ ಉಳಿದುಕೊಂಡ ಕೊಹ್ಲಿ
ನವದೆಹಲಿ , ಶನಿವಾರ, 18 ಫೆಬ್ರವರಿ 2023 (09:00 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್,ಗವಾಸ್ಕರ್ ಟೆಸ್ಟ್ ಪಂದ್ಯವಾಡಲು ದೆಹಲಿಯಲ್ಲಿರುವ ಟೀಂ ಇಂಡಿಯಾಗೆ ಹೋಟೆಲ್ ಸಮಸ್ಯೆ ಎದುರಾಗಿದೆ.

ಟೀಂ ಇಂಡಿಯಾ ದೆಹಲಿಗೆ ಬಂದಾಗಲೆಲ್ಲಾ ಐಟಿಸಿ ಮಯೂರ ಅಥವಾ ತಾಜ್ ಹೋಟೆಲ್ ನಲ್ಲಿ ತಂಗುತ್ತದೆ. ಆದರೆ ಈ ಬಾರಿ ಜಿ20 ಶೃಂಗ ಸಭೆ ಮತ್ತು ಮದುವೆ ಸೀಸನ್ ಜೋರಾಗಿರುವುದರಿಂದ ಈ ಎರಡೂ ಹೋಟೆಲ್ ಗಳೂ ಭರ್ತಿಯಾಗಿವೆ. ಹೀಗಾಗಿ ಈ ಹೋಟೆಲ್ ನಿಂದ ಅನಿವಾರ್ಯವಾಗಿ ಟೀಂ ಇಂಡಿಯಾ ಹೊರನಡೆಯಬೇಕಾಯಿತು.

ಇದೀಗ ಟೀಂ ಇಂಡಿಯಾ ಹೋಟೆಲ್ ಲೀಲಾಗೆ ‍ಸ್ಥಳಾಂತರವಾಗಿದೆ. ಇನ್ನು, ವಿರಾಟ್ ಕೊಹ್ಲಿ ಮಾತ್ರ ತಂಡದ ಆಟಗಾರರ ಜೊತೆ ಹೋಟೆಲ್ ನಲ್ಲಿ ಉಳಿಯದೇ ಗುರ್ಗಾಂವ್ ನಲ್ಲಿರುವ ತಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ಡರ್,ಗವಾಸ್ಕರ್ ಟೆಸ್ಟ್: ಆಸೀಸ್ 263 ಕ್ಕೆ ಆಲೌಟ್, ಜಡೇಜಾ, ಅಶ್ವಿನ್ ದಾಖಲೆ