Select Your Language

Notifications

webdunia
webdunia
webdunia
webdunia

ಕ್ರಿಕೆಟ್ ತಂಡಕ್ಕೆ ಟೆನಿಸ್ ತಾರೆ ಸಾನಿಯಾ ಯಾಕೆ? ಆರ್ ಸಿಬಿ ನಡೆಗೆ ಟ್ರೋಲ್

ಸಾನಿಯಾ ಮಿರ್ಜಾ
Photo Courtesy: Twitter
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಮೆಂಟರ್ ಆಗಿ ಆಯ್ಕೆ ಮಾಡಿದ್ದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಕ್ರಿಕೆಟ್ ತಂಡದ ಮೆಂಟರ್ ಆಗಿ ಕ್ರಿಕೆಟಿಗರನ್ನೇ ಆಯ್ಕೆ ಮಾಡಲಾಗುತ್ತದೆ. ಆದರೆ ಟೆನಿಸ್ ತಾರೆಯಾಗಿರುವ ಸಾನಿಯಾರನ್ನು ಆಯ್ಕೆ ಮಾಡಿರುವ ಆರ್ ಸಿಬಿ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕೆಲವರು ಈ ನಡೆಯನ್ನು ಟೀಕಿಸಿದ್ದಾರೆ. ಸಾನಿಯಾಗೂ ಕ್ರಿಕೆಟ್ ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಟೆನಿಸ್ ನಲ್ಲಿ ಸಾನಿಯಾ ಲೆಜೆಂಡ್ ಆಗಿರಬಹುದು ಆದರೆ ಕ್ರಿಕೆಟ್ ನಲ್ಲಿ ಅವರು ಏನು ಗೈಡ್ ಮಾಡಲು ಸಾಧ‍್ಯ ಎಂದು ಪ್ರಶ್ನಿಸಿದ್ದಾರೆ. ಆದರೆ ಕೆಲವರು ಈ ಅಚ್ಚರಿಯ ನಡೆಯನ್ನು ಸಮರ್ಥಿಸಿದ್ದು, ಇದು ನಿಜಕ್ಕೂ ಅದ್ಭುತ ನಿರ್ಧಾರ. ಸಾನಿಯಾ ಕೇವಲ ಮೆಂಟರ್ ಅಷ್ಟೇ. ಕೋಚ್ ಅಲ್ಲ ಎಂದು ಸಮರ್ಥಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಟಿ20 ವಿಶ್ವಕಪ್: ‘ಹಿಟ್ ವುಮನ್’ ರಿಚಾ ಘೋಷ್ ಮತ್ತೊಮ್ಮೆ ಜಬರ್ದಸ್ತ್ ಆಟ