Select Your Language

Notifications

webdunia
webdunia
webdunia
webdunia

ಕ್ರಿಕೆಟ್ ನ ಕಿಂಗ್, ಕ್ವೀನ್ ಆರ್ ಸಿಬಿಯಲ್ಲಿ: ಮಹಿಳಾ ಐಪಿಎಲ್ ಆರ್ ಸಿಬಿ ತಂಡ ಹೀಗಿದೆ

ಮಹಿಳಾ ಐಪಿಎಲ್
Photo Courtesy: Twitter
ಬೆಂಗಳೂರು: ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಆರ್ ಸಿಬಿ ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಸ್ಮೃತಿ ಮಂಧನಾ ಸೇರಿದಂತೆ ಸ್ಟಾರ್ ಆಟಗಾರರು ಆರ್ ಸಿಬಿಗೆ ಬಂದಿದ್ದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಮೃತಿ ಮಂಧನಾ ಆಗಮನವಾಗುತ್ತಿದ್ದಂತೇ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳ ಸುರಿಮಳೆಗೈಯ್ದಿದ್ದಾರೆ. ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ಈಗಾಗಲೇ ಆರ್ ಸಿಬಿ ಪುರುಷರ ತಂಡದಲ್ಲಿದ್ದಾರೆ. ಇದೀಗ ಕ್ರಿಕೆಟ್ ನ ಕ್ವೀನ್ ಎನಿಸಿಕೊಂಡಿರುವ ಸ್ಮೃತಿ ಮಂಧನಾ ಕೂಡಾ ತಂಡಕ್ಕೆ ಆಗಮಿಸಿದ್ದಾರೆ. ಇಬ್ಬರೂ ಸ್ಟಾರ್ ಆಟಗಾರರು, ಇಬ್ಬರದ್ದೂ ಜೆರ್ಸಿ ನಂ.18. ಹೀಗಾಗಿ ಅಭಿಮಾನಿಗಳ ಖುಷಿ ಮೇರೆ ಮೀರಿದೆ. ಅತ್ಯಂತ ಗರಿಷ್ಠ ಮೊತ್ತ 3.4 ಕೋಟಿ ರೂ.ಗೆ ಮಂಧನಾ ಆರ್ ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಇದಲ್ಲದೆ, ಭಾರತದ ತಾರೆ ರಿಷಾ ಘೋಷ್, ರೇಣುಕಾ ಸಿಂಗ್, ಆಸ್ಟ್ರೇಲಿಯಾ ತಾರೆ ಎಲ್ಲಿಸ್ ಪೆರಿ ಮುಂತಾದವರೂ ಆರ್ ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಉಳಿದಂತೆ ಆರ್ ಸಿಬಿ ತಂಡ ಹೀಗಿದೆ.

ಸ್ಮೃತಿ ಮಂಧನಾ (3.4 ಕೋಟಿ), ಸೋಫಿ ಡಿವೈನ್ (50 ಲಕ್ಷ ರೂ.), ಎಲ್ಲಿಸ್ ಪೆರಿ (1.7 ಕೋಟಿ), ರೇಣುಕಾ ಸಿಂಗ್ (1.5 ಕೋಟಿ), ರಿಚಾ ಘೋಷ್ (1.9 ಕೋಟಿ), ಎರಿನ್ ಬರ್ನ್ಸ್ (30 ಲಕ್ಷ ರೂ.), ದಿಶಾ ಕಸತ್ (10 ಲಕ್ಷ ರೂ.),ಇಂದ್ರಾಣಿ ರಾಯ್ (10 ಲಕ್ಷ), ಶ್ರೇಯಾಂಕ್ ಪಾಟೀಲ್ (10 ಲಕ್ಷ), ಕನ್ನಿಕಾ ಅಹುಜಾ (35 ಲಕ್ಷ), ಆಶಾ ಶೋಭನಾ (10 ಲಕ್ಷ), ಹೀದರ್ ನೈಟ್ (40 ಲಕ್ಷ), ಡೇನ್ ವ್ಯಾನ್ ನೀಕರ್ಕ್ (30 ಲಕ್ಷ), ಪ್ರೀತಿ ಬೋಸ್ (30 ಲಕ್ಷ), ಪೂನಮ್ ಖೇಮ್ನಾರ್ (10 ಲಕ್ಷ), ಕೋಮಲ್ ಝಂಝಾದ್ (25 ಲಕ್ಷ), ಮೇಗನ್ ಶಟ್ (40 ಲಕ್ಷ), ಸಹನಾ ಪವರ್ (10 ಲಕ್ಷ).

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಸ್ಥಳಾಂತರವಾಗಲು ಕಾರಣವೇನು?