Publish Date: Tue, 14 Feb 2023 (08:40 IST)
Updated Date: Tue, 14 Feb 2023 (08:55 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗಾವಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಬಿಸಿಸಿಐ ಇಂಧೋರ್ ಗೆ ಸ್ಥಳಾಂತರ ಮಾಡಿದೆ.
ಈ ಮೊದಲು ಈ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯುವುದೆಂದು ನಿಗದಿಯಾಗಿತ್ತು. ಆದರೆ ಈಗ ಕೊನೆ ಕ್ಷಣದಲ್ಲಿ ಬಿಸಿಸಿಐ ಸ್ಥಳ ಬದಲಾಯಿಸಿದೆ.
ಇದಕ್ಕೆ ಕಾರಣ ಇತ್ತೀಚೆಗೆ ಧರ್ಮಶಾಲಾ ಮೈದಾನದಲ್ಲಿ ನವೀಕರಣ ಕೆಲಸ ಕೈಗೊಂಡಿರುವುದು. ಮೈದಾನ ಇನ್ನೂ ಪೂರ್ತಿಯಾಗಿ ಸಿದ್ಧವಾಗಿಲ್ಲ. ಹೀಗಾಗಿ ಧರ್ಮಶಾಲಾದಿಂದ ಇಂಧೋರ್ ಗೆ ಪಂದ್ಯ ಸ್ಥಳಾಂತರ ಮಾಡಲಾಗಿದೆ. ಈ ಪಂದ್ಯ ಮಾರ್ಚ್ 1 ರಿಂದ 5 ರವರೆಗೆ ನಡೆಯಲಿದೆ.