Publish Date: Mon, 13 Feb 2023 (09:00 IST)
Updated Date: Mon, 13 Feb 2023 (09:08 IST)
ನವದೆಹಲಿ: ಟೀಂ ಇಂಡಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಹೀನಾಯವಾಗಿ ಸೋತು ಕುಗ್ಗಿರುವ ಆಸ್ಟ್ರೇಲಿಯಾಗೆ ಎರಡನೇ ಟೆಸ್ಟ್ ವೇಳೆ ಈ ಸ್ಟಾರ್ ಆಟಗಾರನ ಸೇರ್ಪಡೆಯಾಗುವ ಸಾಧ‍್ಯತೆಯಿದೆ.
ಎರಡನೇ ಟೆಸ್ಟ್ ಪಂದ್ಯ ನವದೆಹಲಿಯಲ್ಲಿ ಫೆಬ್ರವರಿ 17 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಸೇರ್ಪಡೆಯಾಗುವ ಸಾಧ‍್ಯತೆಯಿದೆ.
ತಂಡದ ಸ್ಟಾರ್ ಆಟಗಾರರಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್ ವುಡ್ ಮತ್ತು ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಮೊದಲ ಪಂದ್ಯಕ್ಕೆ ಗಾಯದಿಂದಾಗಿ ಗೈರಾಗಿದ್ದು ತಂಡಕ್ಕೆ ಹೊಡೆತ ಬಿದ್ದಿತ್ತು. ಇದೀಗ ಸ್ಟಾರ್ಕ್ ದೆಹಲಿಗೆ ಬಂದಿಳಿಯುವ ನಿರೀಕ್ಷೆಯಿದೆ. ಆದರೆ ಹೇಝಲ್ ವುಡ್ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಕ್ಯಾಮರೂನ್ ಗ್ರೀನ್ ಭವಿಷ್ಯ ಒಂದೆರಡು ದಿನಗಳಲ್ಲಿ ತಿಳಿದುಬರಲಿದೆ. ಹೀಗಾಗಿ ಸರಣಿ ಕೈ ತಪ್ಪುವ ಮೊದಲು ಆಸೀಸ್ ತನ್ನ ಸ್ಟಾರ್ ಆಟಗಾರರನ್ನು ಕರೆಯಿಸಿಕೊಳ್ಳಲು ಪ್ರಯತ್ನ ನಡೆಸಲಿದೆ.