Publish Date: Wed, 15 Feb 2023 (10:26 IST)
Updated Date: Wed, 15 Feb 2023 (10:29 IST)
ಬೆಂಗಳೂರು: ಮಾರ್ಚ್ ನಲ್ಲಿ ಆರಂಭವಾಗಲಿರುವ ಮಹಿಳಾ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಭಾಗಿಯಾಗುತ್ತಿದೆ.
ಆರ್ ಸಿಬಿ ಮೊನ್ನೆಯಷ್ಟೇ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಮೃತಿ ಮಂಧನಾ, ಎಲ್ಲಿಸ್ ಪೆರಿ ಸೇರಿದಂತೆ ಬಿಗ್ ಪ್ಲೇಯರ್ಸ್ ಗಳನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.
ಇದೀಗ ತಂಡದ ಸಹಾಯಕ ಸಿಬ್ಬಂದಿಗಳನ್ನು ಆಯ್ಕೆ ಮಾಡುತ್ತಿದೆ. ಅಚ್ಚರಿಯೆಂಬಂತೆ ತಂಡದ ಮೆಂಟರ್ ಆಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಆಯ್ಕೆ ಮಾಡಲಾಗಿದೆ. ಕ್ರಿಕೆಟ್ ಗೂ ಸಾನಿಯಾಗೂ ಏನು ಸಂಬಂಧ ಎಂದು ಕೇಳಬಹುದು. ಆದರೆ ಸಾನಿಯಾ ಸ್ಪೂರ್ತಿದಾಯಕ ಕ್ರೀಡಾ ತಾರೆ. ಹೀಗಾಗಿ ಅವರ ಮಾರ್ಗದರ್ಶನ ತಂಡದ ಆಟಗಾರ್ತಿಯರಲ್ಲಿ ಉತ್ಸಾಹ ತುಂಬಲಿದೆ ಎಂದು ಆರ್ ಸಿಬಿ ಹೇಳಿಕೊಂಡಿದೆ.