Select Your Language

Notifications

webdunia
webdunia
webdunia
webdunia

ಕೊಹ್ಲಿ ಸುಳ್ಳುಗಾರ, ಗಂಗೂಲಿಗೆ ಕೊಹ್ಲಿಯನ್ನು ಕಂಡರೆ ಆಗುತ್ತಿರಲಿಲ್ಲ: ವಿವಾದಕ್ಕೀಡಾದ ಚೇತನ್ ಶರ್ಮಾ

ಕೊಹ್ಲಿ ಸುಳ್ಳುಗಾರ, ಗಂಗೂಲಿಗೆ ಕೊಹ್ಲಿಯನ್ನು ಕಂಡರೆ ಆಗುತ್ತಿರಲಿಲ್ಲ: ವಿವಾದಕ್ಕೀಡಾದ ಚೇತನ್ ಶರ್ಮಾ
ಮುಂಬೈ , ಬುಧವಾರ, 15 ಫೆಬ್ರವರಿ 2023 (10:14 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ವಿರುದ್ಧ ಕುಟುಕು ಕಾರ್ಯಾಚರಣೆಯೊಂದರಲ್ಲಿ ನೀಡಿದ ಹೇಳಿಕೆ ಈಗ ಸಂಚಲನ ಸೃಷ್ಟಿ ಮಾಡಿದೆ.

ಕುಟುಕು ಕಾರ್ಯಾಚಾರಣೆಯೊಂದರಲ್ಲಿ ಚೇತನ್ ನೀಡಿರುವ ಹೇಳಿಕೆಗಳು ಈಗ ಬಿಸಿಸಿಐ ಕೆಂಗಣ‍್ಣಿಗೆ ಗುರಿಯಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಶೇ.100 ರಷ್ಟು ಫಿಟ್ ಇಲ್ಲದೇ ಇದ್ದರೂ ಉದ್ದೀಪನಾ ಪರೀಕ್ಷೆಯಲ್ಲಿ ಪತ್ತೆಯಾಗದಂತಹ ಇಂಜೆಕ್ಷನ್ ಬಳಸಿ ಫಿಟ್ ಎಂದು ಘೋಷಿಸಿಕೊಳ್ಳುತ್ತಾರೆ. ಕೊಹ್ಲಿ ಮತ್ತು ಗಂಗೂಲಿ ನಡುವೆ ಸಂಘರ್ಷವಿತ್ತು. ರೋಹಿತ್ ಮತ್ತು ಕೊಹ್ಲಿ ನಡುವೆ ಅಹಂ ಸಂಘರ್ಷವಿತ್ತು ಎಂಬಿತ್ಯಾದಿ ಸ್ಪೋಟಕ ವಿಚಾರಗಳನ್ನು ಚೇತನ್ ಶರ್ಮಾ ಬಿಚ್ಚಿಟ್ಟಿದ್ದಾರೆ. ಅವರ ಈ ಹೇಳಿಕೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.

ಚೇತನ್ ಹೇಳಿರುವಂತೆ, ಜಸ್ಪ್ರೀತ್ ಬುಮ್ರಾ ಈ ಮೊದಲು 100% ಫಿಟ್ ಇಲ್ಲದೇ ಇದ್ದರೂ ಇಂಜೆಕ್ಷನ್ ನೀಡಿ ಬಲವಂತವಾಗಿ ಅವರನ್ನು ಆಡಿಸಲಾಯಿತು. ಇದೇ ರೀತಿ ಇತರ ಕ್ರಿಕೆಟಿಗರೂ ಮಾಡುತ್ತಾರೆ. ಇಶಾನ್ ಕಿಶನ್, ಶುಬ್ಮನ್ ಗಿಲ್ ಮುಂತಾದವರ ಫಾರ್ಮ್ ನಿಂದಾಗಿ ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಶಿಖರ್ ಧವನ್ ವೃತ್ತಿ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ವಿರಾಟ್ ಕೊಹ್ಲಿ ಮತ್ತು ಗಂಗೂಲಿ ನಡುವೆ ಸಂಘರ್ಷವಿತ್ತು. ಕೊಹ್ಲಿ ತಾವು ಮಂಡಳಿಗಿಂಲೂ ದೊಡ್ಡವರು ಎಂದುಕೊಂಡಿದ್ದರು. ರವಿಶಾಸ್ತ್ರಿಯನ್ನು ಕೋಚ್ ಮಾಡುವುದರಲ್ಲಿ ಕೊಹ್ಲಿ ಪಾತ್ರ ದೊಡ್ಡದಿತ್ತು. ನಾಯಕತ್ವ ಬಿಡಬೇಡಿ ಎಂದು ಗಂಗೂಲಿ ಹೇಳಿದ್ದರು. ಆದರೂ ಗಂಗೂಲಿ ತಮ್ಮ ನಾಯಕತ್ವ ಕೈಬಿಡಲು ಕಾರಣ ಎಂದು ತಿಳಿದ ಕೊಹ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೊಹ್ಲಿಯನ್ನು ನಾಯಕತ್ವದಿಂದ ಕೈ ಬಿಡುವುದು ಕೇವಲ ಗಂಗೂಲಿ ನಿರ್ಧಾರವಾಗಿರಲಿಲ್ಲ.

ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಟಿ20 ತಂಡದ ನಾಯಕರಾಗಿರುವುದಿಲ್ಲ. ಹಾರ್ದಿಕ್ ಪಾಂಡ್ಯ ದೀರ್ಘಾವಾಧಿಯ ನಾಯಕರಾಗುತ್ತಾರೆ. ತಂಡದಲ್ಲಿ ಎರಡು ಗ್ರೂಪ್ ಇದೆ. ಒಂದನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಾರೆ, ಇನ್ನೊಂದನ್ನು ಕೊಹ್ಲಿ ಮುನ್ನಡೆಸುತ್ತಾರೆ ಎಂಬಿತ್ಯಾದಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಪಾಂಡ್ಯ ಮರು ಮದುವೆ