Select Your Language

Notifications

webdunia
webdunia
webdunia
webdunia

ಫೋನ್ ಕಳೆದುಕೊಂಡ ಬೇಸರದಲ್ಲಿ ಟ್ವೀಟ್ ಮಾಡಿದ ಕೊಹ್ಲಿ: ನೆಟ್ಟಿಗರ ಪ್ರತಿಕ್ರಿಯೆ ಏನಿತ್ತು ಗೊತ್ತಾ?!

ಫೋನ್ ಕಳೆದುಕೊಂಡ ಬೇಸರದಲ್ಲಿ ಟ್ವೀಟ್ ಮಾಡಿದ ಕೊಹ್ಲಿ: ನೆಟ್ಟಿಗರ ಪ್ರತಿಕ್ರಿಯೆ ಏನಿತ್ತು ಗೊತ್ತಾ?!
ನಾಗ್ಪುರ , ಮಂಗಳವಾರ, 7 ಫೆಬ್ರವರಿ 2023 (17:38 IST)
ನಾಗ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಹೊಂದಿದ್ದಾರೆ. ಅವರು ಏನೇ ಸಂದೇಶ ಹಾಕಿದರೂ ಅದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ.

ಇದೀಗ ಕೊಹ್ಲಿ ತಮ್ಮ ಹೊಸ ಫೋನ್ ಕಳೆದುಕೊಂಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇನ್ನೂ ಬಾಕ್ಸ್ ಕೂಡಾ ಓಪನ್ ಮಾಡುವ ಮೊದಲೇ ಫೋನ್ ಕಳೆದುಕೊಂಡರೆ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಿಜವಾಗಿಯೂ ಫೋನ್ ಕಳೆದುಕೊಂಡಿದ್ದರ ಬಗ್ಗೆಯಾ ಅಥವಾ ಮೊಬೈಲ್ ಜಾಹೀರಾತಿನ ಭಾಗವಾ ಎಂಬುದು ಸ್ಪಷ್ಟವಾಗಿಲ್ಲ.

ಆದರೆ ಕೊಹ್ಲಿ ಇಂತಹದ್ದೊಂದು ಟ್ವೀಟ್ ಮಾಡುತ್ತಿದ್ದಂತೇ ನೆಟ್ಟಿಗರಿಗೆ ಇದು ತಮಾಷೆಯ ವಸ್ತುವಾಗಿದೆ. ಕೊಹ್ಲಿ ಫೋನ್ ಕಳೆದುಕೊಂಡಿದ್ದರ ಬಗ್ಗೆ ನಾನಾ ಬಗೆಯ ಕಾಮೆಂಟ್, ಮೆಮೆಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇನ್ನು, ಪ್ರಮುಖ ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಹಾಗಿದ್ದರೆ ಅತ್ತಿಗೆ (ಅನುಷ್ಕಾ ಶರ್ಮಾ) ಫೋನ್ ಬಳಸಿ ಐಸ್‍ ಕ್ರೀಂ ಆರ್ಡರ್ ಮಾಡಿ ಎಂದಿದೆ. ಅಂತೂ ಕೊಹ್ಲಿಯ ಈ ಟ್ವೀಟ್ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ನಾಮಿನಿ: ಐದು ಕ್ರೀಡಾಪಟುಗಳ ಹೆಸರು