ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಾದ ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ತಂಡದ ಜೊತೆ ಟೀಂ ಹೋಟೆಲ್ ಗೆ ಬರುವಾಗ ತಿಲಕವಿಟ್ಟುಕೊಳ್ಳಲಕು ನಿರಾಕರಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ತಂಡದ ಇತರ ಆಟಗಾರರಂತೇ ಮುಸ್ಲಿಂ ಧರ್ಮೀಯರಾದ ಉಮ್ರಾನ್ ಮಲಿಕ್ ಮತ್ತು ಮೊಹಮ್ಮದ್ ಸಿರಾಜ್ ಗೆ ತಿಲಕವಿಟ್ಟುಕೊಳ್ಳಲು ಹೋದಾಗ ಅವರು ನಿರಾಕರಿಸಿದ್ದರು ಎಂದು ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಬ್ಬರೂ ಟೀಕೆಗೊಳಗಾಗಿದ್ದರು.
ಆದರೆ ಈಗ ಉಮ್ರಾನ್ ಮಲಿಕ್ ತಿಲಕವಿಡಿಸಿಕೊಳ್ಳುತ್ತಿರುವ ಫೋಟೋವೊಂದನ್ನು ಹರಿಯಬಿಟ್ಟಿರುವ ಫ್ಯಾನ್ಸ್ ತಮ್ಮ ಮೆಚ್ಚಿನ ಕ್ರಿಕೆಟಿಗ ಧರ್ಮಾಂಧನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಉಮ್ರಾನ್ ವಿರುದ್ಧ ಬೇಕೆಂದೇ ಸುಳ್ಳು ಸುದ್ದಿ ಹರಿಯಬಿಡಲಾಗಿದೆ ಎಂದು ವಾದಿಸಿದ್ದಾರೆ.