Publish Date: Tue, 07 Feb 2023 (08:20 IST)
Updated Date: Tue, 07 Feb 2023 (08:43 IST)
ಮುಂಬೈ: ಭಾರತ-ಆಸ್ಟ್ರೇಲಿಯಾ ಸರಣಿ ಎಂದರೆ ಹಿಂದೆಲ್ಲಾ ಅಭಿಮಾನಿಗಳು ಗ್ಲೆನ್ ಮೆಗ್ರಾತ್-ಸಚಿನ್ ತೆಂಡುಲ್ಕರ್, ಬ್ರೆಟ್ ಲೀ-ರಾಹುಲ್ ದ್ರಾವಿಡ್ ನಡುವಿನ ಕದನ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.
ಇದಾದ ಬಳಿಕ ಹರ್ಭಜನ್ ಸಿಂಗ್-ಆಂಡ್ರ್ಯೂ ಸೈಮಂಡ್ಸ್ ನಡುವೆ, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ನಡುವಿನ ಸ್ಲೆಡ್ಜಿಂಗ್ ಗಳು ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು.
ಆದರೆ ಪ್ರಸ್ತುತ ಕಾಲದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಅಭಿಮಾನಿಗಳು ಇಷ್ಟಪಡುವುದು ರಿಷಬ್ ಪಂತ್ ಆಟ ನೋಡಲು. ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಅದೂ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆಟದಲ್ಲಿ ಮಾತ್ರವಲ್ಲ, ಆಸೀಸ್ ವಿರುದ್ಧ ಅವರ ಸ್ಲೆಡ್ಜಿಂಗ್ ಗಳು ಆಟದ ರಂಗು ಹೆಚ್ಚಿಸುತ್ತವೆ. ಆದರೆ ಸದ್ಯಕ್ಕೆ ರಿಷಬ್ ಅಪಘಾತಕ್ಕೀಡಾಗಿ ಕ್ರಿಕೆಟ್ ಆಡುವ ಪರಿಸ್ಥಿತಿಯಲ್ಲಿಲ್ಲ. ಇನ್ನೇನು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಹೀಗಾಗಿ ಫ್ಯಾನ್ಸ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.