Select Your Language

Notifications

webdunia
webdunia
webdunia
webdunia

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಒಂದೇ ದಾಖಲೆಗೆ ಕೊಹ್ಲಿ, ಪೂಜಾರ ಪೈಪೋಟಿ

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಒಂದೇ ದಾಖಲೆಗೆ ಕೊಹ್ಲಿ, ಪೂಜಾರ ಪೈಪೋಟಿ
ನಾಗ್ಪುರ , ಬುಧವಾರ, 8 ಫೆಬ್ರವರಿ 2023 (08:40 IST)
Photo Courtesy: Twitter
ನಾಗ್ಪುರ: ಗುರುವಾರದಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಗರಾದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಒಂದೇ ದಾಖಲೆಗಾಗಿ ಪೈಪೋಟಿ ನಡೆಸಲಿದ್ದಾರೆ.

ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ನ ಯಶಸ್ವೀ ಬ್ಯಾಟಿಗರಾದ ಇವರು ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 2000 ರನ್ ಪೂರೈಸಿದ ಭಾರತೀಯ ಆಟಗಾರರ ಪಟ್ಟಿ ಸೇರಲು ಕೆಲವೇ ಅಂತರದ ದೂರದಲ್ಲಿದ್ದಾರೆ. ಈಗಾಗಲೇ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಈ ದಾಖಲೆ ಮಾಡಿದ್ದಾರೆ.

ಇದೀಗ ಪೂಜಾರ 37 ಇನಿಂಗ್ಸ್ ಗಳಿಂದ 1893 ರನ್ ಗಳಿಸಿದ್ದು ಇನ್ನು 107 ರನ್ ಗಳಿಸಿದರೆ ಆ ಮೈಲಿಗಲ್ಲು ತಲುಪಲಿದ್ದಾರೆ. ಅತ್ತ ವಿರಾಟ್ ಕೊಹ್ಲಿ 36 ಇನಿಂಗ್ಸ್ ಗಳಿಂದ 1682 ರನ್ ಗಳಿಸಿದ್ದು, ಇನ್ನೂ 318 ರನ್ ಗಳ ದೂರದಲ್ಲಿದ್ದಾರೆ. ಹಾಗೆ ನೋಡಿದರೆ ಪೂಜಾರ ಈ ದಾಖಲೆಯನ್ನು ಮೊದಲು ಮಾಡುವ ಎಲ್ಲಾ ಸಾಧ‍್ಯತೆಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ಡರ್,ಗವಾಸ್ಕರ್ ಟೆಸ್ಟ್ ಸರಣಿ ಹಿನ್ನಲೆ