Select Your Language

Notifications

webdunia
webdunia
webdunia
webdunia

ಬಾರ್ಡರ್,ಗವಾಸ್ಕರ್ ಟೆಸ್ಟ್ ಸರಣಿ ಹಿನ್ನಲೆ

ಬಾರ್ಡರ್,ಗವಾಸ್ಕರ್ ಟೆಸ್ಟ್ ಸರಣಿ ಹಿನ್ನಲೆ
ನಾಗ್ಪುರ , ಬುಧವಾರ, 8 ಫೆಬ್ರವರಿ 2023 (08:30 IST)
Photo Courtesy: Twitter
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ದಿಗ್ಗಜ ಅಲನ್ ಬಾರ್ಡರ್ ಮತ್ತು ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಆಡಲಾಗುತ್ತದೆ.

ಹೀಗಾಗಿಯೇ ಇದನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಕರೆಯಲಾಗುತ್ತದೆ. ಇದು ಆರಂಭವಾಗಿದ್ದು 1996 ರಲ್ಲಿ. ಈ ಸರಣಿಯಲ್ಲಿ ಭಾರತದ್ದೇ ಮೇಲುಗೈ.

ಇದುವರೆಗೆ 15 ಟೂರ್ನಿಗಳು ನಡೆದಿದ್ದು ಈ ಪೈಕಿ ಒಂಭತ್ತು ಬಾರಿ ಭಾರತ ಸರಣಿ ಗೆದ್ದಿದ್ದರೆ ಐದು ಬಾರಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು. ಒಂದು ಬಾರಿ ಮಾತ್ರ ಡ್ರಾ ಆಗಿತ್ತು. ಅದು ಗಂಗೂಲಿ ನೇತೃತ್ವದಲ್ಲಿ. ಆದರೆ ಅದಕ್ಕಿಂತ ಮೊದಲಿನ ಟೂರ್ನಿ ಭಾರತವೇ ಗೆದ್ದಿದ್ದರಿಂದ ಟ್ರೋಫಿ ಭಾರತದ ಬಳಿಯೇ ಉಳಿದಿತ್ತು. ಭಾರತ ಆಸ್ಟ್ರೇಲಿಯಾ ನೆಲದಲ್ಲಿ 2 ಬಾರಿ ಸರಣಿ ಗೆದ್ದರೆ, ಆಸೀಸ್ ಭಾರತದಲ್ಲಿ ಒಮ್ಮೆ ಮಾತ್ರ ಗೆದ್ದಿದೆ. ಸಚಿನ್ ತೆಂಡುಲ್ಕರ್ ಟೂರ್ನಿಯ ಯಶಸ್ವೀ ಬ್ಯಾಟಿಗ ಎನ್ನಬಹುದು. ಅವರು ಒಟ್ಟು ಮೂರು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 65 ಇನಿಂಗ್ಸ್ ಗಳಿಂದ ಸಚಿನ್ 3262 ರನ್ ಗಳಿಸಿದ್ದಾರೆ. ಅನಿಲ್ ಕುಂಬ್ಳೆ ಯಶಸ್ವೀ ಬೌಲರ್. 20 ಪಂದ್ಯಗಳಿಂದ ಅವರು 111 ವಿಕೆಟ್ ಕಬಳಿಸಿದ್ದಾರೆ.

ಈ ಬಾರಿ 16 ನೇ ಬಾರಿಗೆ ಬಾರ್ಡರ್-ಗವಾಸ್ಕರ್ ಸರಣಿ ನಡೆಯುತ್ತಿದ್ದು, ಟೀಂ ಇಂಡಿಯಾ ಸತತ ನಾಲ್ಕನೇ ಬಾರಿ ಕಪ್ ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ಕಳೆದುಕೊಂಡ ಬೇಸರದಲ್ಲಿ ಟ್ವೀಟ್ ಮಾಡಿದ ಕೊಹ್ಲಿ: ನೆಟ್ಟಿಗರ ಪ್ರತಿಕ್ರಿಯೆ ಏನಿತ್ತು ಗೊತ್ತಾ?!