Publish Date: Wed, 22 Feb 2023 (08:40 IST)
Updated Date: Wed, 22 Feb 2023 (08:52 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ದೆಹಲಿ ಟೆಸ್ಟ್ ಪಂದ್ಯದ ವೇಳೆ ತಿಂಡಿ ತಟ್ಟೆ ನೋಡಿ ನೀಡಿದ್ದ ರಿಯಾಕ್ಷನ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಡ್ರೆಸ್ಸಿಂಗ್ ರೂಂನಲ್ಲಿ ಕೋಚ್ ದ್ರಾವಿಡ್ ಜೊತೆ ಸುದೀರ್ಘ ಚರ್ಚೆಯಲ್ಲಿದ್ದಾಗ ಸಹಾಯಕರೊಬ್ಬರು ತಿಂಡಿ ತಂದಿತ್ತಾಗ ಕೊಹ್ಲಿ ನೀಡಿದ್ದ ರಿಯಾಕ್ಷನ್ ಎಲ್ಲರ ಗಮನ ಸೆಳೆದಿತ್ತು. ಅದು ಕೊಹ್ಲಿಯ ಮೆಚ್ಚಿನ ಚೋಲೆ ಬಟೋರೆ ಇರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.
ಇದೀಗ ಕೊಹ್ಲಿ ಸಂದರ್ಶನವೊಂದರಲ್ಲಿ ತಾವು ಇಷ್ಟವೇ ಪಡದ ತರಕಾರಿ ಯಾವುದೆಂದು ಬಹಿರಂಗಪಡಿಸಿರುವುದು ವೈರಲ್ ಆಗಿದೆ. ಕೊಹ್ಲಿ ತಮ್ಮ ಫಿಟ್ನೆಸ್ ಗಾಗಿ ವೆಜಿಟೇರಿಯನ್ ಆಹಾರ ಸೇವಿಸುತ್ತಾರೆ. ಆದರೆ ಈ ಒಂದು ತರಕಾರಿ ಮಾತ್ರ ಬಿಲುಕುಲ್ ತಿನ್ನಲ್ಲ ಎಂದಿದ್ದಾರೆ.
ಅದು ಹಾಗಲಕಾಯಿ. ಏನೇ ಆದರೂ ಸರಿ ಹಾಗಲಕಾಯಿಯಿಂದ ಮಾಡಿದ ಆಹಾರ ಮಾತ್ರ ನನಗೆ ಇಷ್ಟವೇ ಇಲ್ಲ. ಇದನ್ನು ಮಾತ್ರ ಬಿಲುಕುಲ್ ತಿನ್ನಲ್ಲ ಎಂದಿದ್ದಾರೆ ಕೊಹ್ಲಿ. ಇದಕ್ಕೆ ನೆಟ್ಟಿಗರೂ ಸಹಮತ ವ್ಯಕ್ತಪಡಿಸಿದ್ದಾರೆ.