Publish Date: Tue, 21 Feb 2023 (08:40 IST)
Updated Date: Tue, 21 Feb 2023 (08:43 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕಳಪೆ ಫಾರ್ಮ್ ನಿಂದಾಗಿ ತೀವ್ರ ಟೀಕೆಗೊಳಗಾಗಿದ್ದಾರೆ. ಅವರನ್ನು ತಂಡದಿಂದ ಕಿತ್ತು ಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ರಾಹುಲ್ ಗೆ ಸಿಗುವಷ್ಟು ಅವಕಾಶ ಇನ್ಯಾರಿಗೂ ಸಿಗಲಿಲ್ಲ ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡ ಘೋಷಣೆ ಮಾಡಿದ್ದು, ರಾಹುಲ್ ರಿಂದ ಉಪ ನಾಯಕತ್ವ ಕಿತ್ತುಕೊಂಡಿದೆ. ಹೀಗಾಗಿ ಕೆಎಲ್ ರಾಹುಲ್ ಕೊನೆಯ ಎರಡು ಟೆಸ್ಟ್ ಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅವರ ಬದಲು ಫಾರ್ಮ್ ನಲ್ಲಿರುವ ಶುಬ್ಮನ್ ಗಿಲ್ ಗೆ ಅವಕಾಶ ನೀಡುವ ಸಾಧ‍್ಯತೆಯಿದೆ.