ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಡುವೆ ಇದೀಗ 10 ದಿನಗಳ ಬ್ರೇಕ್ ಸಿಕ್ಕಿದೆ. ಇದನ್ನು ಕ್ರಿಕೆಟಿಗರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಮೂರನೇ ಟೆಸ್ಟ್ ಆರಂಭವಾಗುವುದು ಮಾರ್ಚ್ 1 ರಂದು. ಅಲ್ಲಿಯವರೆಗೆ ಕ್ರಿಕೆಟಿಗರಿಗೆ ಸುದೀರ್ಘ ಬ್ರೇಕ್ ಸಿಕ್ಕಿದೆ. ಈ ನಡುವೆ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಕರಾವಳಿಯವರು. ಇದೀಗ ಪತಿಯ ಯಶಸ್ಸಿಗಾಗಿ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.