ಸಿಡ್ನಿ: ಈಗ ಎಲ್ಲೇ ಕ್ರೀಡಾ ಕೂಟಗಳು ನಡೆಯುವುದಿದ್ದರೂ ಕ್ರೀಡಾಪಟುಗಳು ಕೊರೋನಾ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದುಕೊಂಡಿರಬೇಕು ಎಂಬ ನಿಯಮ ಮಾಡಲಾಗುತ್ತಿದೆ. ಆದರೆ ಆ ನಿಯಮ ಈ ಖ್ಯಾತ ಟೆನಿಸ್ ತಾರೆ ಜೊಕೊವಿಕ್ ಗೆ ಕಂಟಕವಾಗಿದೆ.
ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ವ್ಯಾಕ್ಸಿನೇಷನ್ ಕಡ್ಡಾಯಗೊಳಿಸಲಾಗಿದೆ. ಆದರೆ ಜೊಕೊವಿಕ್ ಕೊರೋನಾ ವ್ಯಾಕ್ಸಿನ್ ಗೊಳಗಾಗಿಲ್ಲ.
ಈ ಹಿಂದೆ ಸಂದರ್ಶನವೊಂದರಲ್ಲಿ ನಾನು ವ್ಯಾಕ್ಸಿನ್ ಪಡೆದುಕೊಂಡಿದ್ದೇನೋ ಇಲ್ಲವೋ ಎಂಬುದನ್ನು ಬಹಿರಂಪಡಿಸಲು ಇಷ್ಟಪಡುವುದಿಲ್ಲ ಎಂದಿದ್ದರು. ಇದೀಗ ವ್ಯಾಕ್ಸಿನ್ ಆಗದೇ ಇರುವ ಕಾರಣಕ್ಕೆ ಜೊಕ್ ವಿಕ್ ಗೆ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಟೂರ್ನಿಗೆ ಪ್ರವೇಶ ನಿಷೇಧವಾಗಲಿದೆ.