Publish Date: Wed, 20 Oct 2021 (09:05 IST)
Updated Date: Wed, 20 Oct 2021 (09:07 IST)
ಮುಂಬೈ: ಈ ಬಾರಿ ದೀಪಾವಳಿ ಹಬ್ಬವನ್ನು ಪರಿಸರ ಮಾಲಿನ್ಯವಾಗದಂತೆ, ಅರ್ಥಪೂರ್ಣವಾಗಿ ಹೇಗೆ ಆಚರಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಟಿಪ್ಸ್ ಕೊಡುತ್ತೇನೆ ಎಂದಿದ್ದ ವಿರಾಟ್ ಕೊಹ್ಲಿ ಟ್ರೋಲ್ ಆದ ಬಳಿಕ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಕೊಹ್ಲಿ ಹೀಗೊಂದು ಪೋಸ್ಟ್ ಮಾಡುತ್ತಿದ್ದಂತೇ ಟ್ವಿಟರಿಗರು ಅವರನ್ನು ಭಾರೀ ಟ್ರೋಲ್ ಮಾಡಿದ್ದರು. ದೀಪಾವಳಿ ವೇಳೆಗೆ ನಿಮಗೆ ಪರಿಸರ ಕಾಳಜಿ ನೆನಪಾಗುತ್ತದೆಯೇ ಎಂದು ಮೆಮೆಗಳ ಮೂಲಕ ಟ್ರೋಲ್ ಮಾಡಿದ್ದರು. ನಮ್ಮ ಕುಟುಂಬದವರೊಂದಿಗೆ ದೀಪಾವಳಿ ಹೇಗೆ ಆಚರಿಸಬೇಕು ಎಂಬುದನ್ನು ನೀವು ನಮಗೆ ಪಾಠ ಮಾಡಬೇಡಿ. ನಮಗೆ ತಲೆ ತಲಾಂತರದಿಂದ ದೀಪಾವಳಿ ಹೇಗೆ ಆಚರಿಸಬೇಕು ಎಂದು ಗೊತ್ತಿದೆ ಎಂದಿದ್ದರು.
ಭಾರೀ ಟ್ರೋಲ್ ಗಳ ಬಳಿಕ ಎಚ್ಚೆತ್ತುಕೊಂಡ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ಪೋಸ್ಟ್ ಮಾಡದೇ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ಇದುವರೆಗೆ ಈ ಕುರಿತಾಗಿ ಯಾವುದೇ ಪೋಸ್ಟ್ ಮಾಡಿಲ್ಲ.