ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ಹೊರನಡೆಯುತ್ತಿರುವ ರವಿಶಾಸ್ತ್ರಿ ಮುಂದಿನ ಭವಿಷ್ಯಕ್ಕೆ ಈಗಲೇ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದ ಮೇಲೆ ರವಿಶಾಸ್ತ್ರಿ ತಮ್ಮ ಮೆಚ್ಚಿನ ಕಾಮೆಂಟರಿಗೆ ಮರಳಬಹುದು. ಅಥವಾ ಐಪಿಎಲ್ ತಂಡಕ್ಕೆ ಕೋಚ್ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ರವಿಶಾಸ್ತ್ರಿಯನ್ನು ಕೋಚ್ ಆಗಿ ಇಷ್ಟಪಡದೇ ಇರುವವರು ಇದ್ದರೂ ಅವರ ಕಾಮೆಂಟರಿ ಶೈಲಿಯನ್ನು ಮೆಚ್ಚದವರು ಇಲ್ಲ. ಕಂಚಿನ ಕಂಠದ ರವಿಶಾಸ್ತ್ರಿ ಮರಳಿ ಕಾಮೆಂಟರಿ ಮಾಡುವುದನ್ನು ಕೇಳಲು ಎಷ್ಟೋ ಜನ ಕಾಯುತ್ತಿದ್ದಾರೆ. ಹೀಗಾಗಿ ಅವರು ಕೆಲವು ದಿನಗಳ ಬ್ರೇಕ್ ನ ಬಳಿಕ ಕಾಮೆಂಟರಿಗೆ ಮರಳಬಹುದು. ಇದಲ್ಲದೇ ಹೋದರೆ ಮುಂದಿನ ಐಪಿಎಲ್ ನಿಂದ ಎರಡು ಹೊಸ ತಂಡಗಳ ಸೇರ್ಪಡೆಯಾಗಲಿದ್ದು, ಆ ತಂಡಗಳಿಗೆ ಕೋಚ್ ಆಗಿ ನೇಮಕವಾದರೂ ಅಚ್ಚರಿಯಿಲ್ಲ.