ದುಬೈ: ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಸಹ ಕ್ರಿಕೆಟಿಗ ಶಿಖರ್ ಧವನ್ ಬ್ಯಾಟಿಂಗ್ ಮಾಡುವ ಶೈಲಿಯನ್ನು ಅನುಕರಿಸಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಜೊತೆಗೆ ಶಿಖ್ಖಿ ನನ್ನ ನಟನೆ ಹೇಗಿದೆ? ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ.
ಶಿಖರ್ ಧವನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಮಹಾ ಕೂಟಕ್ಕೆ ಮೊದಲು ಕೊಹ್ಲಿ ತಮ್ಮ ಗೆಳೆಯನನ್ನು ನೆನಪು ಮಾಡಿಕೊಂಡು ಈ ರೀತಿ ಆಕ್ಟಿಂಗ್ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ. ತುಂಬಾ ಚೆನ್ನಾಗಿ ನಟಿಸುತ್ತೀರಿ ಎಂದು ಕೆಲವರು ಬೆನ್ನುತಟ್ಟಿದರೆ ಮತ್ತೆ ಕೆಲವರು ಅಂತೂ ಹಾಗೂ ಹೀಗೂ ಎಲ್ಲರ ಮುಖದಲ್ಲಿ ನಗು ಮೂಡಿಸಲು ಈ ವ್ಯಕ್ತಿ ಏನು ಬೇಕಾದರೂ ಮಾಡುತ್ತಾರೆ ಎಂದು ಹೊಗಳಿದ್ದಾರೆ.