Select Your Language

Notifications

webdunia
webdunia
webdunia
webdunia

ಯುಎಸ್ ಓಪನ್ ಸೋತ ಜೊಕೊವಿಕ್ ಗೆ ಭಾರೀ ಮೊತ್ತದ ದಂಡದ ಬರೆ

ಯುಎಸ್ ಓಪನ್ ಸೋತ ಜೊಕೊವಿಕ್ ಗೆ ಭಾರೀ ಮೊತ್ತದ ದಂಡದ ಬರೆ
ನ್ಯೂಯಾರ್ಕ್ , ಮಂಗಳವಾರ, 14 ಸೆಪ್ಟಂಬರ್ 2021 (09:50 IST)
ನ್ಯೂಯಾರ್ಕ್: ಯುಎಸ್ ಓಪನ್ ಫೈನಲ್ ನಲ್ಲಿ ಸೋತು ಐತಿಹಾಸಿಕ ಗೆಲುವು ತಪ್ಪಿಸಿಕೊಂಡ ನಿರಾಸೆಯಲ್ಲಿ ದರ್ವರ್ತನೆ ತೋರಿದ ವಿಶ್ವ ನಂ.1 ಟೆನಿಸಿಗ ನೊವಾಕ್ ಜೊಕೊವಿಕ್ ಗೆ ದಂಡದ ಬರೆ ಹಾಕಲಾಗಿದೆ.
Photo Courtesy: Google


ರಷ್ಯಾದ ಮಡ್ವಡೇವ್ ವಿರುದ್ಧ ಫೈನಲ್ ನಲ್ಲಿ 6-4,6-4, 6-4 ಅಂತರದಿಂದ ಸೋತ ಜೊಕೊವಿಕ್ ಹತಾಶೆಯಿಂದ ಬಾಲ್ ಬಾಯ್ ನತ್ತ ರಾಕೆಟ್ ಬೀಸಿದ್ದರು. ಬಳಿಕ ನೆಲಕ್ಕೆ ರಾಕೆಟ್ ಬಡಿದು ಅದನ್ನು ಮುರಿದಿದ್ದರು. ಅವರ ಈ ವರ್ತನೆ ಬಾಲ್ ಬಾಯ್ ಗೆ ಹೆದರಿಕೆ ಹುಟ್ಟಿಸಿತ್ತು.

ಈ ಕಾರಣಕ್ಕೆ ಅವರಿಗೆ 5000 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ. ಕಳೆದ ವರ್ಷವೂ ಯುಎಸ್ ಓಪನ್ ಟೂರ್ನಿಯಲ್ಲಿ ದುರ್ವರ್ತನೆಗೆ ಜೊಕೊವಿಕ್ ಗೆ ದಂಡ ವಿಧಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಟೀಂ ಇಂಡಿಯಾ ಕೋಚ್ ಆಗಲ್ಲ ಎಂದ ಗ್ಯಾರಿ ಕರ್ಸ್ಟನ್