ನ್ಯೂಯಾರ್ಕ್: ಯುಎಸ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಟೆನಿಸ್ ಸ್ಪರ್ಧೆಯಲ್ಲಿ ಇಂದು ಖ್ಯಾತ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಮತ್ತು ಡಾನಿಲ್ ಮಡ್ವಡೇವ್ ನಡುವಿನ ಪಂದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಜೊಕೊವಿಕ್ ಗೆದ್ದರೆ ಅದೊಂದು ಇತಿಹಾಸವಾಗಲಿದೆ. ಒಂದೇ ಕ್ಯಾಲೆಂಡರ್ ಇಯರ್ ನಲ್ಲಿ ಆಸ್ಟ್ರೇಲಿಯಾ ಓಪನ್, ವಿಂಬಲ್ಡನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಗೆದ್ದ ವಿನೂತನ ದಾಖಲೆ ಅವರ ಪಾಲಾಗಲಿದೆ. ಈ ರೀತಿ ಮಾಡಿದ ಕೇವಲ ಎರಡನೇ ಟೆನಿಸ್ ಆಟಗಾರ ಎಂಬ ಕೀರ್ತಿಗೆ ಅವರು ಪಾತ್ರರಾಗಲಿದ್ದಾರೆ.
52 ವರ್ಷದ ಹಿಂದೆ ಒಂದೇ ವರ್ಷದ ಎಲ್ಲಾ ಗ್ರ್ಯಾಂಡ್ ಸ್ಲಾಂ ಟೂರ್ನಿಗಳನ್ನು ಗೆದ್ದ ದಾಖಲೆಯನ್ನು ರಾಡ್ ಲೆವರ್ ಮಾಡಿದ್ದರು. ಅದಾದ ಬಳಿಕ ಈಗ ಜೊಕೋವಿಕ್ ಗೆ ಆ ಅವಕಾಶವಿದೆ. ಅದಲ್ಲದೆ, ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಂ ಟೂರ್ನಿಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಜೊಕೊವಿಕ್ ಪಾಲಾಗಲಿದೆ. ಆದರೆ ಎದುರಾಳಿ ಮಡ್ವಡೇವ್ ಕೂಡಾ ಅಷ್ಟೇ ಪ್ರಬಲ ಆಟಗಾರನಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.