Daily Horoscope

Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮತ್ತೆ ಕುಸ್ತಿಪಟುಗಳಿಂದ ಮೂರು ಚಿನ್ನ

ಕಾಮನ್ ವೆಲ್ತ್ ಗೇಮ್ಸ್
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪಾಲಿಗೆ ಕುಸ್ತಿಪಟುಗಳು ಅದೃಷ್ಟಶಾಲಿಗಳಾಗಿ ಪರಿಣಮಿಸಿದ್ದಾರೆ. ನಿನ್ನೆ ಒಂದೇ ದಿನ ಭಾರತದ ಮೂವರು ಕುಸ್ತಿಪಟುಗಳು ಮೂರು ಚಿನ್ನ ಗೆದ್ದುಕೊಟ್ಟಿದ್ದಾರೆ.

ಹಿರಿಯ ತಾರೆ ರವಿಕುಮಾರ್ ದಹಿಯಾ, ನವೀನ್, ವಿನೇಶ್ ಪೋಘಟ್ ತಮ್ಮ ತಮ್ಮ ವಿಭಾಗಗಳಲ್ಲಿ ಫೈನಲ್ ತಲುಪಿ ಗೆಲ್ಲುವ ಮೂಲಕ ಚಿನ್ನದ ಸಾಧನೆ ಮಾಡಿದ್ದಾರೆ.  ಇದರೊಂದಿಗೆ ಭಾರತ ಒಟ್ಟಾರೆ 13 ಚಿನ್ನದ ಪದಕ  ಗೆದ್ದಂತಾಗಿದೆ. ಕುಸ್ತಿಯಲ್ಲಿ ಭಾರತದ ಮಹಿಳಾ ತಾರೆ ಪೂಜಾ ಗೆಹ್ಲೋಟ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇನ್ನೊಂದೆಡೆ ಪುರುಷರ ಹಾಕಿಯಲ್ಲಿ ಆಫ್ರಿಕಾ ವಿರುದ್ಧ ರೋಚಕ ಜಯಗಳಿಸಿದ ಭಾರತ ಹಾಕಿ ತಂಡ ಫೈನಲ್ ತಲುಪಿ ಪದಕ ಖಾತ್ರಿಗೊಳಿಸಿದೆ.ಪ್ಯಾರಾ ಕಾಮನ್ ವೆಲ್ತ್ ನಲ್ಲಿ ಟೇಬಲ್ ಟೆನಿಸ್ ನಲ್ಲಿ ಭಾರತದ ಭವಿನಾ ಪಟೇಲ್ ಚಿನ್ನ ಗೆದ್ದಿದ್ದಾರೆ. ಇಂದು  ಇನ್ನಷ್ಟು ಪದಕದ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ ನಲ್ಲಿ ಫೈನಲ್ಸ್ ತಲುಪಿದ ಭಾರತ ಕ್ರಿಕೆಟ್ ತಂಡ