Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್: ಬೆಳ್ಳಿ ಗೆದ್ದ ಪ್ರಿಯಾಂಕ, ಕುಸ್ತಿಯಲ್ಲಿ ಮತ್ತಷ್ಟು ಪದಕದ ನಿರೀಕ್ಷೆ

ಕಾಮನ್ ವೆಲ್ತ್ ಗೇಮ್ಸ್: ಬೆಳ್ಳಿ ಗೆದ್ದ ಪ್ರಿಯಾಂಕ, ಕುಸ್ತಿಯಲ್ಲಿ ಮತ್ತಷ್ಟು ಪದಕದ ನಿರೀಕ್ಷೆ
ಬರ್ಮಿಂಗ್ ಹ್ಯಾಮ್ , ಶನಿವಾರ, 6 ಆಗಸ್ಟ್ 2022 (16:44 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಭಾರತಕ್ಕೆ 10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕ ಗೋಸ್ವಾಮಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್ ನಲ್ಲಿ ಭಾರತ ಮತ್ತೊಂದು ಪದಕ ತನ್ನದಾಗಿಸಿಕೊಂಡಿದೆ.
 

ಕುಸ್ತಿಯಲ್ಲಿ ಇಂದೂ ಭಾರತೀಯರ ಮೇಲೆ ನಿರೀಕ್ಷೆಯಿದೆ. ವಿನೇಶ್ ಪೋಘಟ್ 53 ಕೆ.ಜಿ. ವಿಭಾಗದಲ್ಲಿ ಗೆಲುವು ಸಾಧಿಸಿದರೆ ಪೂಜಾ ಸಿಹಾಗ್ ಸೆಮಿಫೈನಲ್ ಗೇರಿದ್ದಾರೆ.

ಬಾಕ್ಸಿಂಗ್ ನಲ್ಲಿ ಭಾರತದ ಭರವಸೆಯ ತಾರೆ ಅಮಿತ್ ಪಂಘಲ್ ಫೈನಲ್ ಗೇರಿದ್ದು ಕನಿಷ್ಠ ರಜತ ಪದಕ ಖಾತ್ರಿಗೊಳಿಸಿದ್ದಾರೆ.  ಟೇಬಲ್ ಟೆನಿಸ್ ನಲ್ಲಿ ಭಾರತದ ಹಿರಿಯ ತಾರೆ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ ಸೆಮಿಫೈನಲ್ ಗೇರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್ ಏನೂ ದೊಡ್ಡ ಟೂರ್ನಿಯಲ್ಲ: ಸೋತ ಬಳಿಕ ಬಾಕ್ಸರ್ ಲವ್ಲೀನಾ ಹೇಳಿಕೆ