ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಸೋತ ಬಳಿಕ ಭಾರತದ ಮಹಿಳಾ ಬಾಕ್ಸರ್ ಲವ್ಲೀನಾ ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ.
ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಈ ಬಾರಿ ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆಲ್ಲಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆರಂಭದಲ್ಲೇ ತಮ್ಮ ಕೋಚ್ ಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಲು ಒಪ್ಪಿಗೆ ಸಿಗಲಿಲ್ಲ ಎಂದು ಲವ್ಲೀನಾ ವಿವಾದ ಮಾಡಿಕೊಂಡಿದ್ದರು. ಅದಾದ ಬಳಿಕ ವಿವಾದ ಬಗೆಹರಿದಿತ್ತು.
ಆದರೆ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಲವ್ಲೀನಾ ಸೋತು ಸ್ಪರ್ಧೆಯಿಂದ ನಿರ್ಗಮಿಸಬೇಕಾಯಿತು. ಬಳಿಕ ಮಾತನಾಡಿರುವ ಲವ್ಲೀನಾ ಕಾಮನ್ ವೆಲ್ತ್ ಗೇಮ್ಸ್ ಏನೂ ದೊಡ್ಡ ಕ್ರೀಡಾ ಕೂಟವಲ್ಲ. ನನ್ನ ಪ್ರಮುಖ ಗುರಿ ಏನಿದ್ದರೂ ಪ್ಯಾರಿಸ್ ಒಲಿಂಪಿಕ್ಸ್. ಕಾಮನ್ ವೆಲ್ತ್ ಗೇಮ್ಸ್ ನಿಂದ ನನಗೇನೂ ಪ್ರಯೋಜನವಾಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.