Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್: ಇಂದು ಮಿಸ್ ಮಾಡದೇ ನೋಡಬೇಕಾದ ಪಂದ್ಯಗಳು

ಕಾಮನ್ ವೆಲ್ತ್ ಗೇಮ್ಸ್: ಇಂದು ಮಿಸ್ ಮಾಡದೇ ನೋಡಬೇಕಾದ ಪಂದ್ಯಗಳು
ಬರ್ಮಿಂಗ್ ಹ್ಯಾಮ್ , ಶನಿವಾರ, 6 ಆಗಸ್ಟ್ 2022 (09:30 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಭಾರತಕ್ಕೆ ಮಹತ್ವದ ಪಂದ್ಯಗಳಿವೆ. ಮಿಸ್ ಮಾಡದೇ ನೋಡಬೇಕಾದ ಪಂದ್ಯಗಳ ಲಿಸ್ಟ್ ಇಲ್ಲಿದೆ.

ಭಾರತ ಚಿನ್ನದ ಪದಕದ ನಿರೀಕ್ಷೆಯಲ್ಲಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವಾಡಲಿದ್ದಾರೆ. ಈ ಪಂದ್ಯ ಸಂಜೆ 4.20 ಕ್ಕೆ ನಡೆಯಲಿದೆ.

ಕುಸ್ತಿ ಪಟುಗಳು ನಿನ್ನೆ ಭಾರತಕ್ಕೆ ಪದಕಗಳ ಸುರಿಮಳೆಗೈಯ್ದಿದ್ದರು. ಇಂದೂ ಬಹುನಿರೀಕ್ಷಿತ ಎರಡು ಪಂದ್ಯಗಳಿವೆ. ಮಧ್ಯಾಹ್ನ 3 ಗಂಟೆಗೆ ವಿನೇಶ್ ಪೋಘಟ್ ಮತ್ತು ಸಂಜೆ 5.40 ಕ್ಕೆ ರವಿಕುಮಾರ್ ದಹಿಯಾ ತಮ್ಮ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಇನ್ನು ಬಾಕ್ಸಿಂಗ್ ನಲ್ಲಿ ಫೈನಲ್ ಮೇಲೆ ಕಣ್ಣಿಟ್ಟಿರುವ ಅಮಿತ್ ಪಂಘಲ್ ಇಂದು 3.30 ಕ್ಕೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಪೈಪೋಟಿಗಿಳಿಯಲಿದ್ದಾರೆ. ಇದಲ್ಲದೆ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ವೆಲ್ತ್ ಗೇಮ್ಸ್: ಗೆದ್ದ ಖುಷಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕುಣಿದಾಡಿದ ಬಜರಂಗ್, ಕಣ್ಣೀರು ಸುರಿಸಿದ ಸಾಕ್ಷಿ ಮಲಿಕ್