Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ ನಲ್ಲಿ ಫೈನಲ್ಸ್ ತಲುಪಿದ ಭಾರತ ಕ್ರಿಕೆಟ್ ತಂಡ

ಭಾರತ ಮಹಿಳಾ ಕ್ರಿಕೆಟ್
ಬರ್ಮಿಂಗ್ ಹ್ಯಾಮ್ , ಶನಿವಾರ, 6 ಆಗಸ್ಟ್ 2022 (18:46 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂಗ್ಲೆಂಡ್ ನ್ನು ಸೆಮಿಫೈನಲ್ಸ್ ನಲ್ಲಿ ಸೋಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ತಲುಪಿದೆ.

ಕೊನೆಯ 5 ಓವರ್ ಗಳಲ್ಲಿ ಅದ್ಭುತ ಬೌಲಿಂಗ್, ಫೀಲ್ಡಿಂಗ್ ಮಾಡಿದ ಭಾರತೀಯರು ರೋಚಕವಾಗಿ 4 ರನ್ ಗಳಿಂದ ಗೆಲ್ಲುವ ಮೂಲಕ ಫೈನಲ್ ತಲುಪಿದೆ. ಇದರೊಂದಿಗೆ ಭಾರತಕ್ಕೆ ಕ್ರಿಕೆಟ್ ನಲ್ಲಿ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಸ್ನೇಹ ರಾಣಾ 2, ದೀಪ್ತಿ ಶರ್ಮಾ 1 ವಿಕೆಟ್ ಕಬಳಿಸಿದರು. ಇನ್ನು ಉಳಿದಂತೆ ಮೂರು ವಿಕೆಟ್ ರನೌಟ್ ರೂಪದಲ್ಲಿ ಬಂದಿದ್ದು ಭಾರತೀಯರ ಬಿಗುವಿನ ಫೀಲ್ಡಿಂಗ್ ಗೆ ಸಾಕ್ಷಿಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್: ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ. ಸಿಂಧುಗೆ ಕಠಿಣ ಗೆಲುವು